ನಾ(ಆ )ಸ್ತಿಕ
ನಾ(ಆ )ಸ್ತಿಕ


ಇರಲಿಲ್ಲ ನನಗೆ ದೇವರಲ್ಲಿ
ಅಂದು ಸ್ವಲ್ಪವೂ ನಂಬಿಕೆ
ದೇವರನ್ನ ನಂಬಿದವರನ್ನು
ಕಂಡರೆ ಏಕೋ ಅಂಜಿಕೆ
ಇಂದಿಗೂ ಅರ್ಥವಾಗಿಲ್ಲ
ಆಸ್ತಿಕರ ಸಂಖ್ಯೆ ಏಕೆ ಹೆಚ್ಚು
ತಿಳಿಯಲು ಅವರಿವರ ಕೇಳಿ
ಹಿಡಿಸಿದರು ನನಗೇ ಹುಚ್ಚು
ಮೊದಲು ಕನಸಲ್ಲಿ ಕಾಡುತ್ತಿತ್ತು
ಹೇಳಿದ ಭಕ್ತಿ ಕಥೆ ಅವರಿವರು
ವ್ಯರ್ಥ ಪ್ರಲಾಪವೆಂದು ಬಿಟ್ಟೆ
ಕಣ್ತೆರೆಸಿತು ಇಂದು ಅದೇ ದೇವರು
ದೇವರಿಲ್ಲ ಬರೀ ಮೂಢನಂಬಿಕೆ
ಎಂದು ಅರಚುತ್ತಾರೆ ನಾಸ್ತಿಕರು
ಪೂರ್ಣ ನಂಬಿದವರು ಹೇಳರು
ದೇವರಿದ್ದಾನೆ ಎಂದು ಆಸ್ತಿಕರು