ಹುಚ್ಚನ ಪ್ರೀತಿ
ಹುಚ್ಚನ ಪ್ರೀತಿ
ಹುಚ್ಚು ಪ್ರೀತಿಗೆ
ಬೆಚ್ಚದ ಹುಡುಗಿಯ
ಇಚ್ಚೆಯ ತಿಳಿಸೆಂದ
ಚುಚ್ಚಿ ಬೆರಳಲಿ
ಬಿಚ್ಚಿದೆ ಗರಿಯು
ಮೆಚ್ಚಿದೆ ನಾನೆಂದ
ಮುಚ್ಚಿದ ಕಣ್ಣಲಿ
ಕೊಚ್ಚಿ ಕೆಡವುವ
ಕಿಚ್ಚ ಆರಿಸೆಂದ
ಬೆಚ್ಚದ ಬಾಲೆ
ಕೆಚ್ಚೆದೆಯಿಂದ
ಪಿಚ್ಚೆಂದುಗಿದು
ಎಚ್ಚರ ತಪ್ಪದೆ
ಹುಚ್ಚ ಬಿಡಿಸುವೆ
ಹೆಚ್ಚುವುದಾನಂದ
ಪೆಚ್ಚು ಮೋರೆಯ
ಮುಚ್ಚಿ ಕಯ್ಯಲಿ
ಹುಚ್ಚ ಓಡಿಬಂದ