Revolutionize India's governance. Click now to secure 'Factory Resets of Governance Rules'—A business plan for a healthy and robust democracy, with a potential to reduce taxes.
Revolutionize India's governance. Click now to secure 'Factory Resets of Governance Rules'—A business plan for a healthy and robust democracy, with a potential to reduce taxes.

Ramamurthy Somanahalli

Romance Classics Inspirational

4  

Ramamurthy Somanahalli

Romance Classics Inspirational

ಹಾರೋಣ ಬಾನಾಡಿಯಾಗಿ!

ಹಾರೋಣ ಬಾನಾಡಿಯಾಗಿ!

1 min
295

ಮುಂಜಾನೆ ಸುರಿವ ಹನಿ ಹನಿ ಮಂಜಿನಲಿ

ಸುಳಿ ಗಾಳಿ ತರುವ ತುಂತುರು ಮಳೆಯಲಿ

ಮರೆಯೋಣ ಕಹಿಯನು ಹೆಜ್ಜೆ ಹಾಕುತ ಜೊತೆಯಲಿ

ದಾಟುವ ಸಪ್ತ ಸಾಗರವ ಪ್ರೀತಿಯಾ ನೌಕೆಯಲಿ||೧||

ತಂತಿ ನಾನು ವೀಣೆ ನೀನು ಅನುರಾಗ ಮೂಡದೇನು

ನೀನು ಹಣತೆ ದೀಪ ನಾನು ಬೆಳಕು ಮೂಡದೇನು

ನೀನು ನೌಕೆ ನಾವಿಕಾ ನಾನು ದೋಣಿ ಸಾಗದೇನು

ನೀನು ರಥವು ಗಾಲಿ ನಾನು ಪಥವು ಸಾಗದೇನು ||೨||

ರೆಕ್ಕೆ ಬಿಚ್ಚಿ ಮುಗಿಲೇರಿ ಹಾರೋಣ ಬಾನಾಡಿಯಾಗಿ

ಚಂದಿರನಂಗಳದಿ ಗೆಜ್ಜೆಕಟ್ಟಿ ಕುಣಿಯೋಣ ನವಿಲಾಗಿ

ಮುಂಜಾವ ರಂಗಿನಾರತಿಗೆ ಹಾಡೋಣ ಕೋಗಿಲೆಯಾಗಿ

ಒಲವಿನಾ ಗೀತೆ ಹಾಡೋಣ ಈಜುತ ಕಡಲ ಮೀನಾಗಿ ||೩||

Rate this content
Log in

Similar kannada poem from Romance