ಸಂಜೆ ಆಯಿತಲ್ಲಿ...
ಸಂಜೆ ಆಯಿತಲ್ಲಿ...
1 min
279
ಸಂಜೆ ಆಯಿತಲ್ಲಿ ನೋಡು ಬೆಂಕಿಯುಂಡೆ ಸೂರ್ಯನು
ಕಡಲ ಅಲೆಯ ನಡುವೆ ತೇಲಿ ಮುಳುಗಿ ಹೋದನು
ತಲೆಯೆತ್ತಿ ಮೇಲೆ ನೋಡು
ನಗುತ ಬಂದ ಚಂದ್ರನು
ತಾರೆಯರ ಜೊತೆಗೂಡಿ ಭೂಮಿಗೆ ಚೆಲ್ಲಿದ ಬೆಳಕನು ||೧||
ಹಸಿವು ಎನಲು ತಿನಿಪಳಮ್ಮ ತುಪ್ಪದ ಅನ್ನ
ಕುಡಿಯಲು ನೀಡುತ
ಬಿಸಿಬಿಸಿ ನೊರೆ ಹಾಲನ್ನ
ಬೆಲ್ಲವ ನೀಡಿ ಗಲ್ಲವ ಮುಟ್ಟಿ ಕೊಡುವಳೆನಗೆ ಮುತ್ತನ್ನ
ಚಂದ್ರನ ತೋರಿ ತಾರೆಯ ಎಣಿಸಿ ಪೇಳುವಳು ಕಥೆಯನ್ನ ||೨||
ಹಾಡಲು ಅಮ್ಮ ಜೋಜೋ ಲಾಲಿ
ಮಡಿಲಲಿ ಮಲಗುವೆ ನಾ ಕೇಳುತಲಿ
ನಮಿಸುತ ರಾಮಕೃಷ್ಣರ ಭಕ್ತಿಯಲಿ
ಭೀಮ ಹನುಮನ ಕನಸ ಕಾಣುತಲಿ ||೩||