ಕಾಣದ ಕೈ
ಕಾಣದ ಕೈ
ಕಾಣದ ಕೃತಿಕಾರ ಬಿಡಿಸಿಹ ಚಿತ್ರವ ಕುಂಚದಿ
ಜೀವ ತುಂಬಿ ಅನುರಾಗವ ಹೃದಯದಿ
ಕಳುಹಿಸುತಾ ಧರೆಗೆ ಕಲೆತು ಬಾಳಲೋಸುಗ
ಮನುಜ ಪಥದ ಧರ್ಮ ಉಳಿಸಲೋಸುಗ
ಅತ್ತಿಂದಿತ್ತ ಲಾಗ ಹಾಕುತಾ ಮರ್ಕಟನಂತೆ
ಜಾತಿ ಧರ್ಮದ ಹೆಸರಿನಲಿ ಕಚ್ಚಾಡುತಿಹ ಶ್ವಾನದಂತೆ
ಜಗದೊಡೆಯನ ನಿಯಮ ಮೀರಿ ನಿಂತಹನು
ಮೆರೆದಿಹನು ಮರೆತು ಕಾಲನಾ ಕರೆಯನು ....