ಚಿತೆ ಚಿಂತೆ ಚಿಂತನೆ...!?
ಚಿತೆ ಚಿಂತೆ ಚಿಂತನೆ...!?
ಮೂರು ದಿನದ ಸಂಸಾರದಿ
ನೂರಾರು ಚಿಂತೆಯಾ ಸಾಗರದಿ
ಅನುದಿನ ತೇಲಾಡಿ
ಬದುಕಿನ ಸಂತೆಯಲಿ
ಕಂತೆಯೊಗೆದು
ಚಿತೆಯೇರುವ ಮುನ್ನ
ಚಿಂತಿಸಿ ಅಡಿಯಿಟ್ಟು
ಚಿಂತನೆಯ ತೇರೆಳೆದರೆ
ಚಿತೆ ಚಿಂತೆ ದೂರಾಗಿ
ಬದುಕು ಬಂಗಾರ
ನಮಗಿಲ್ಲ ಚಿತೆ ಚಿಂತೆಗಳ ಭಾರ
ಮೂರು ದಿನದ ಸಂಸಾರದಿ
ನೂರಾರು ಚಿಂತೆಯಾ ಸಾಗರದಿ
ಅನುದಿನ ತೇಲಾಡಿ
ಬದುಕಿನ ಸಂತೆಯಲಿ
ಕಂತೆಯೊಗೆದು
ಚಿತೆಯೇರುವ ಮುನ್ನ
ಚಿಂತಿಸಿ ಅಡಿಯಿಟ್ಟು
ಚಿಂತನೆಯ ತೇರೆಳೆದರೆ
ಚಿತೆ ಚಿಂತೆ ದೂರಾಗಿ
ಬದುಕು ಬಂಗಾರ
ನಮಗಿಲ್ಲ ಚಿತೆ ಚಿಂತೆಗಳ ಭಾರ