ಕವಿತೆ:- ಹೆಣ್ಮಗುವಿನ ಅರಿವು
ಕವಿತೆ:- ಹೆಣ್ಮಗುವಿನ ಅರಿವು
ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ
ಉದ್ದರಿಸುವಳು ಹೆಣ್ಣು
ಆದಿಅನಾದಿ ಕಾಲದಿಂದಲೂ ಪೂಜ್ಯನೀಯಳು ಹೆಣ್ಣು
ಜ್ಞಾನವಂತರು ಆದರಿಸಿ ಹೇಳಿರುವರು
ದೇವತೆಯವಳು
ಜೀವಿಗಳಿಗೆ ಪ್ರೀತಿ ಅಮೃತವ ಉಣಿಸುವಳು ಹೆಣ್ಣು
ಸರಿಸಮರಿಲ್ಲ ಇವಳಿಗೆ ಸಕಲೇಷ್ಟವ ನೀಡುವಳು
ಶಮದಮೆಯ ಶ್ರೀಭೂದುರ್ಗೆ ಸ್ವರೂಪದವಳು ಹೆಣ್ಣು
ವೇದಗಳ ಅಭಿಮಾನಿ ದೇವತೆ ವಿಷ್ಣು ಪ್ರಿಯೆ ಲಕ್ಷ್ಮಿ
ವೇದಗಳ ಅಧ್ಯಯನ ಮಾಡಿದವಳು ಹೆಣ್ಣು
ಶಿವನ ಆರಾಧಿಸಿ ಭಜಿಸಿ ಬರೆದವಳು ಶರಣೆ ಹೆಣ್ಣು
ಹರಿಯ ಆರಾಧಿಸಿ ಭಜಿಸಿ ಬರೆದವಳು ಹರಿದಾಸಿ ಹೆಣ್ಣು
ಪ್ರತಿ ಕ್ಷೇತ್ರದಲ್ಲೂ ಮಿಂಚಿನ ವೇಗದವಳು
ಹೆಜ್ಜೆ ಇಡುವಲ್ಲಿ ಮೇಲಗೈ ಸಾಧಿಸುವಳು ಹೆಣ್ಣು
ಜೀವನದ ಜೊತೆ ಪ್ರವೃತ್ತಿಯಲ್ಲಿ ಇರುತ ಆನಂದಿಸುವಳು
ನಿತ್ಯ ನೂತನ ಚಿನ್ಮಯಿ ನಗು ಮೊಗದವಳು ಹೆಣ್ಣು
ಮರೆಯಬೇಡ ಹೆಣ್ಣೆ ಸಂಸ್ಕಾರದಲ್ಲಿ ಸಾಧನೆಮಾಡು
ಪ್ರಿಯವಾಗಿ ಎಲ್ಲರ ಮನಗೆದ್ದು
ಮಾದರಿಯಾದವಳು ಹೆಣ್ಣು