ಕಥನ-ಕವನ (ಎಳ್ಳಾಮಸ್ಯೆಯ ಹಿನ್ನಲೆ)
ಕಥನ-ಕವನ (ಎಳ್ಳಾಮಸ್ಯೆಯ ಹಿನ್ನಲೆ)
ಬಂದದ ನೋಡಿರಿ ಎಳ್ಳಮಾಸ್ಯೆಯ ಕಾಲ
ಭೂತಾಯಿಯ ನೆನೆಯುವ ಪುಣ್ಯದ
ಕಾಲ
ರೈತರಿಗೆ ಇದೊಂದು ಶುಭ ತರುವ ಕಾಲ
ಬೇಗನೆ ಎದ್ದು ಮಡಿಯಾಗಿ ದೇವಗ ಪೂಜಿಸುತ
ಬಂಡಿಎತ್ತುಗಳಿಗೆ ಅಂದದಿ ಚಂದಾಗಿ ಶ್ರೀಂಗರಿಸುತ
ಚುಮುಚುಮು ಚಳಿಯ ಸಂತೋಸ ಸಂಭ್ರಮಿಸುತ
ಸಜ್ಜೆರೊಟ್ಟಿ , ಎಣ್ಣಗಾಯಿ ಪಲ್ಯವ
ಮಾಡಿ
ಶೇಂಗಾಹೋಳಿಗೆ, ಕಾರೆಳ್ಳುಶೆಂಗಾ ಪುಡಿ
ಹೊಂಟೇವು ಹೊಲಕ ಎಲ್ಲಾರೂ
ಕೂಡಿ
ಅಚ್ಚಸರಿನ ಸೀರೆಯ ಭೂತಾಯಿ ಕಾಣುವಳು
ಆಕಾಶರಾಜನಿಗೆ ಮೆಚ್ಚುಗೆ ನೋಟ ನೋಡುವಳು
ಸೃಷ್ಟಿಯ ವೈಭೋಗಕೆ ಸಂತೋಷಗೊಳ್ಳುವರು
ಹೊಲದಲಿ ಐದು ಕಲ್ಲುಗಳು ಪಾಂಡವರೈವರು
ಬೇವಿನ ಮರದಡಿಯಲಿ ಇಟ್ಟು
ಪೂಜಿಸುವರು
ತಂದ ಬುತ್ತಿಯ ನೈವೇದ್ಯವ ತೋರಿಸುವರು
ಹುಲ್ಲಲಿಗೋ ಹುಲ್ಲಲಿಗೋ ಅನುತ
ನಡೆಯುವರು
ಭೂತಾಯಿಗೆ ತಂದ ಅನ್ನವ ಸಮರ್ಪಿಸುವರು
ನಮ್ಮ ಸಂಸ್ಕಾರ ಸಂಪ್ರಾದಯ
ತಿಳಿಸುವರು
ಅರ್ಥವೆನೆಂದರೆ ಭೂತಾಯಿ ಒಲಿದರೆ
ಹೊಟ್ಟೆಗೆ ಹಿಟ್ಟು
ಭೂತಾಯಿ ಕೈಹಿಡಿದು ನಡೆಸಮ್ಮ ಎನ್ನುವರು ಒಟ್ಟು
ಪ್ರತಿ ಹಬ್ಬದ ಹಿನ್ನಲೆ ತಿಳಿಯಿರಿ ಗುಟ್ಟು