STORYMIRROR

Krithi S Bhat

Abstract Classics Others

4  

Krithi S Bhat

Abstract Classics Others

ಪ್ರಖರತೆಯ ಚೆಲುವ

ಪ್ರಖರತೆಯ ಚೆಲುವ

1 min
303


ಅವನ ಪ್ರಖರತೆಗೆ ನಾ ಸೋತುಹೋದೆ

ಅವನ ಚೆಂದವನ್ನು ನಾ ಕಣ್ಮುಚ್ಚಿ ಆಸ್ವಾದಿಸಿದೆ

ಮನಸ್ಸೇ ದುಃಖದಲ್ಲಿದ್ದಾಗ ದಾರಿ ತೋರಿದನವ

ಕನಸುಗಳ ಸಾಕಾರಗೊಳಿಸುವ ನಿಟ್ಟಿಗೆ ಹುರಿದುಂಬಿಸಿದವ

ಜಗವನ್ನು ಜಯಿಸುವ ಶಕ್ತಿಯುಳ್ಳವನು

ತನ್ನ ಚೆಲುವಲ್ಲೇ ಸೃಷ್ಟಿಯ ಮನಸೆಳೆಯುವನು

ಇವನಿಲ್ಲದೆ ಜಗ ಎಚ್ಚರಗೊಳ್ಳುವುದೇ?

ಇವನ ಶಾಖವಿಲ್ಲದೆ ಜೀವರಾಶಿಗಳು ಅಳಿಯುವವಲ್ಲವೇ?

ಸೂರ್ಯನೆಂದು ಕರೆಯುವರು ಇವನನ್ನು

ಭೂಮಿಯೇ ಇವನ ಸುತ್ತ ಸುತ್ತುವಳು

ಇವರಿಬ್ಬರ ಈ ಪ್ರೇಮ ಪಯಣಕ್ಕೆ ಸಾಕ್ಷಿ ಜೀವಚರಗಳು

ಇವರಿಲ್ಲದಿದ್ದರೆ ಸೃಷ್ಟಿಯಲ್ಲಾಗುವುದು ಅಲ್ಲೋಲಕಲ್ಲೋಲಗಳು.


Rate this content
Log in

Similar kannada poem from Abstract