ಒಡತಿ
ಒಡತಿ


ನಾಳೆಗಾಗಿ ಸ್ವಲ್ಪ ಎತ್ತಿಟ್ಟು
ಸಂಸಾರ ನಡೆಸುವ ಗುಟ್ಟು
ಬೇರಾರಿಗೆ ಗೊತ್ತುಂಟು
ಮನೆಯಾಕೆಯ ಬಿಟ್ಟು
ಇಂದು ಕಷ್ಟಗಳ ಸಹಿಸಿ
ಸುಖವನ್ನ ಹಂಚುವಳು
ನಾಳೆಗಳ ಇಂದೇ ಗ್ರಹಿಸಿ
ಉಳಿಸಿ ಕೂಡಿಡುವಳು
ಹೆತ್ತವರ ಮುದ್ದು ಮಗಳಾಗಿ
ಪತಿಗೆ ತಕ್ಕ ಸತಿಯಾಗುವಳು
ಮಕ್ಕಳ ಪ್ರೀತಿಯ ಮಾತೆಯಾಗಿ
ಆದರದಿ ಎಲ್ಲ ನಿಭಾಯಿಸುವಳು