ಶ್ರಾವಣ
ಶ್ರಾವಣ


ಆಷಾಢದ ಮಬ್ಬು ಕಳೆಯಿತು
ಸಿರಿ ಶ್ರಾವಣ ಧರೆಗಿಳಿಯಿತು
ಭೂದೇವಿ ಮನ ತಣಿಯಿತು
ಸುಖ ಸಂತಸಗಳರಳಿತು
ದುಗುಡ ಮೇಘಗಳುಲಿದವು
ಸಡಗರದಿ ಭೋರ್ಗರೆದವು
ಭೋಮವ್ಯೋಮಗಳ ಬೆಸೆದವು
ಕುಂಭ ದ್ರೋಣ ಮಳೆಗರೆದವು
ಧರಣಿದೇವಿಯು ತಣಿದಳು
ಹಸುರುಡುಗೆಯಿಂ ನಲಿದಳು
ಶರವಣನಾಗಮನದಿ ಬಿರಿದಳು
ಹಸಿದ ಮಕ್ಕಳ ಪೊರೆದಳು
ಸಿರಿಸಂಪದವೆಲ್ಲೆಡೆ ಮೆರೆಯಿತು
ಹಬ್ಬಗಳಾ ಸರದಿ ಬೆಳೆಯಿತು
ಹಸಿರು ತೋರಣ ಕುಣಿಯಿತು
ಶರವಣನ ಸಂತಸವರಳಿತು