ಪಟ್ಟಾಭಿರಾಮಂ
ಪಟ್ಟಾಭಿರಾಮಂ
ವಾಮಾಂಕದೊಳು ವೈದೇಹಿ
ಪದತಲದೊಳ್ ಪವನಸುತ
ಬಲಬದಿಯಲಿ ಸೌಮಿತ್ರಿ
ಇಕ್ಕೆಲಗಳೊಳು ಭರತ ಶತೃಘ್ನರ್
ಇದಿರೊಳು ವಸಿಷ್ಥ ವಾಮದೇವ
ವಿಶ್ವಾಮಿತ್ರ ಮುನಿವರರು
ಸಭೆಯೊಳು ನೆರದಿರ್ಪ
ಸುಗ್ರೀವ ಅಂಗದ ವಿಭೀಷಣರು
ನಡುವಿನಲಿ ರತ್ನಖಚಿತ
ಧರ್ಮ ಸಿಂಹಾಸನದೊಳ್
ವೀರಾಸನದಲಿ ಮಂಡಿಸಿರ್ಪ
ಮೋಹಕ ಪಟ್ಟಾಭಿರಾಮಂ
ನಿನ್ನಯ ಅಂದದಲರಡಿಗೆ
ಅಡಿಗಡಿಗೆ ಮುಡಿ ಇಡುವೆನು.