ಕುಸುಮ
ಕುಸುಮ
ಹೂವಾಗಿ ಅರಳುವ ನಿನ್ನ
ಸೊಬಗನಾಸ್ವಾದಿಪ ಮಂದಿ
ಮಧುವ ಹೀರುವ ಬಯಕೆಯಲಿ
ದಳದಳವ ಹಿಸುಕುವರು
ನಿನ್ನ ಚೆಲುವ ಹಾಡಿ ಹೊಗಳುವರು
ಹೊಗಳಿಕೆಗೆ ಮರುಳಾಗದಿರು
ನಿನ್ನ ಹೊಗಳುವ ಜನರೇ
ನಿನ್ನ ಹಿತಶತೃಗಳೆಂಬುದನು
ನೀನೆಂದು ಮರೆಯದಿರು
ಈಶ ಸೃಷ್ಟಿಯನು ಸಾರ್ಥಕಗೊಳಿಸಿ
ಸಮರ್ಪಿಸಿಕೊ ನೀ ಭಗವದಾರಧನೆಗೆ
ಹೂವಾಗಿ ಅರಳುವ ನಿನ್ನ
ಸೊಬಗನಾಸ್ವಾದಿಪ ಮಂದಿ
ಮಧುವ ಹೀರುವ ಬಯಕೆಯಲಿ
ದಳದಳವ ಹಿಸುಕುವರು
ನಿನ್ನ ಚೆಲುವ ಹಾಡಿ ಹೊಗಳುವರು
ಹೊಗಳಿಕೆಗೆ ಮರುಳಾಗದಿರು
ನಿನ್ನ ಹೊಗಳುವ ಜನರೇ
ನಿನ್ನ ಹಿತಶತೃಗಳೆಂಬುದನು
ನೀನೆಂದು ಮರೆಯದಿರು
ಈಶ ಸೃಷ್ಟಿಯನು ಸಾರ್ಥಕಗೊಳಿಸಿ
ಸಮರ್ಪಿಸಿಕೊ ನೀ ಭಗವದಾರಧನೆಗೆ