ದೀಪವು ನಿನ್ನದೇ..
ದೀಪವು ನಿನ್ನದೇ..
ಎಲ್ಲವೂ ನನ್ನ ನಿಶ್ಚಯಂತೆ ನಡೆಯುತ್ತಿಲ್ಲ,
ನಡೆಯುತ್ತಿರುವ ಎಲ್ಲಾ ಕಾರ್ಯಗಳು,
ನನ್ನ ಹಿಡಿತದಲ್ಲಿಲ್ಲ ...
ಪ್ರತಿಯೊಂದು ದಿನವೂ ಹೊಸ ಅನುಭವ,
ಪ್ರತಿಯೊಂದು ಹೆಜ್ಜೆ ಇಡುವಾಗಲೂ,
ಹೊಸತಾದ ಭಾವ.
ಒಳಿತಾಗಲಿ ಎಂದು ನಾನಿಟ್ಟ ಹೆಜ್ಜೆ,
ಕೆಡುಕು ಮಾಡಿದರೆ ಅದಕ್ಕೆ ನಾನು ಹೊಣೆಯಲ್ಲ.
ಕೆಡುಕಾಗಬಾರದು ಎನ್ನುವ ನನ್ನ ಕಳಕಳಿ,
ಕೆಡುಕನ್ನುಂಟು ಮಾಡಿದರೆ,
ಅದರ ಭಾರವೂ ನನ್ನದಲ್ಲ..
ಹೇ ಜಗನ್ನಿಯಾಮಕ ಎಲ್ಲವೂ,
ನಿನ್ನಚ್ಚೆಯಂತೆ ನಡೆಯುವಾಗ,
ನಾ ಸೂತ್ರದ ಬೊಂಬೆಯಲ್ಲದೆ ಮತ್ತೇನು?
ಪಾಪ ಪುಣ್ಯಗಳ ಲೆಕ್ಕಾಚಾರ ನನಗಿಲ್ಲ.
ಕರ್ಮ ಫಲಗಳ ಹಂಗೂ ನನಗಿಲ್ಲ,
ನೀ ನಡೆಸಿದಂತೆ ನಡೆಯುವೆ,
ನೀ ದಾರಿ ತೋರಿದಡೆ ಸಾಗುವೆ.
ಎಲ್ಲವೂ ನಿನ್ನ ನಿಶ್ಚಯಂತೆ ನಡೆಯಲಿ,
ದೀಪವು ನಿನ್ನದೇ ಗಾಳಿಯು ನಿನ್ನದೇ..
ಆರಿಸುವೆಯೋ ಬದುಕ ಬೆಳಗಿಸುವೆಯೋ?
ನಿನ್ನ ಇಚ್ಛೆಯಂತೆ ಸಾಗಲಿ ಈ ನನ್ನ ಬದುಕು.