ಬದುಕೆಂಬ ಕಡಲು
ಬದುಕೆಂಬ ಕಡಲು


ಕಡಲಲೆಗಳಂತೆ ಭಾವಾಂತರಂಗದ ತರಂಗಗಳು,
ಅಲೆಯಲೆಯಾಗಿ ಅಪ್ಪಳಿಸುತ್ತಿಹುದು,
ಮನದಾಳವೆಂಬ ಸಮುದ್ರದೊಳು..
ಏಳುತ್ತಿರುವ ಭಾವಗಳು ಲೆಕ್ಕವಿಲ್ಲದಷ್ಟು.
ಮೇಲೆ ಅಲೆಗಳ ಅಬ್ಬರ, ಕೆಲವೊಮ್ಮೆ ಚಿನ್ನಾಟ
ಅಪರೂಪಕ್ಕೊಮ್ಮೆ ಅಬ್ಬರಿಸಬಹುದು ಸುನಾಮಿಯು.
ಆದರೂ ಕಡಲೆಂದೂ ಶ್ರೇಷ್ಠ,
ನೂರಾರು ನದಿ ಬಂದು ಸಂಗಮಿಸಲು ಕಾತರಿಸಿಹುದು.
ಬದುಕೆಂಬ ಸಾಗರದ ಆಳದಲ್ಲಿಹುದು,
ಪ್ರಯತ್ನ ಯಶಸ್ಸು ಸಾಧನೆಯೆಂಬ,
ಮುತ್ತು ರತ್ನ ಹವಳಗಳು.
ಮೇಲ್ನೋಟಕ್ಕೆ ಕಾಣುವುದು ಅಷ್ಟೇ,
ಬರೀ ಮರಳು ರಾಶಿ ಉಪುಳ್ಳ ನೀರಿನಂತೆ.