STORYMIRROR

Ramamurthy Somanahalli

Romance Classics Fantasy

4  

Ramamurthy Somanahalli

Romance Classics Fantasy

ನಮ್ಮಡಿಯಿಡಿಸು

ನಮ್ಮಡಿಯಿಡಿಸು

1 min
378

ಮಾಧವವನಾ ಮನ ಮನಸಲಿ ಮನೆಮಾಡಿ

ಕನಸಲಿ ಕನವರಿಸಿ ಕಣ್ಸನ್ನೆಯಲಿ ಕರೆದು

ನಯನದಿ ನೋಡಿ ನಲಿದಿಹಳು....

ರಾಗಾನುರಾಗದಿ ರಾಧೆಯ ರಮಿಸುತ 

ಕಾನನದಿ ಕೊಳನೂದುವ ಕೃಷ್ಣನ

ಮೋಹನ ಮುರಳಿಯ ಮುದದ ಮದನಾರಿ

ಭವ ಬಂಧನ ಬಿಡಿಸುವ

ಭೂರಮಣನು

ಕಾಡಿನಲಿ ಕರುತರುಗಳ ಕರೆದು

ಮರವೇರಿ ಮನಸಾರೆ ಮುರಳಿಯನೂದೆ 

ಕೇಳಲಂದವದು ಕರುಗಳ ಕೊರಳ ಕಂಠನಾದ

ಗಿರಿಯನೆತ್ತಿದ ಗೋವರ್ಧನ ಗಗನದಿ

ಹಾರುವ ಹಕ್ಕಿಗಳ ಹಾಡನು

ಆಲಿಸಿ ಆನಂದದಿ ಆಡಿಪಾಡಿಹನು

ನವನೀತನು ನಿತ್ಯ ನೂತನನು

ಆದಿಯು ಅಂತ್ಯವೂ ಅನಂತವೂ ಅವನೆ

ನನವರತ ನೀ ನಮ್ಮಡಿಯಿಡಿಸು ನಮಿಪೆ ನಲ್ಮೆಯಲಿ.



Rate this content
Log in

Similar kannada poem from Romance