STORYMIRROR

ವಿದ್ಯಾತನಯ ವಿವೇಕ

Romance Classics Inspirational

4  

ವಿದ್ಯಾತನಯ ವಿವೇಕ

Romance Classics Inspirational

ನಿನ ಸ್ಪರ್ಷಕೆ ಆ ಹರ್ಷಕೆ.

ನಿನ ಸ್ಪರ್ಷಕೆ ಆ ಹರ್ಷಕೆ.

1 min
403

ನೀನಿಲ್ಲದೆ ಈ ನಲ್ಲಗೆ

ಬರೀ ವಿರಹದ ಕಾವು.

ಬರಡಾಗಿದೆ ಕೊರಡಾಗಿದೆ

ಮನ ತಾಳದೆ ನೋವು.

ಪ್ರತಿ ಕ್ಷಣವು ನಿನ ನೆನಪು

ಕಾಡುವ ಪರಿ ಏನು

ತುಟಿ ಜೇನಿನ ಮಧುಪಾನಕೆ

ಸರಿಸಾಟಿಯು ಇನ್ನೇನು ?

ಸವಿ ನಿದಿರೆಗೆ ಮುನಿಸಾಗಿದೆ

ಬಾರದು ಬಳಿ ನನ್ನ

ಕಣ್ಮುಚ್ಚಿರೆ ಬರಿ ಕಾಣುವೆ

ಅತಿ ಸುಂದರಿ ನಿನ್ನ.

ನಿನ ತಬ್ಬುಗೆಯಾ ಹಬ್ಬದ

ಸಂಭ್ರಮ ಇಲ್ಲಿಲ್ಲ

ನೀನಿಲ್ಲದೆ ಬದುಕೆದರಿಸೋ

ಶಕ್ತಿಯು ನನಗಿಲ್ಲ.

ಭುವನತ್ರಯ ಲೋಕದ ಜಯ

ನಿನ್ನೆದುರಿಗೆ ತೃಣವು

ಜಗ ನೋಡಿದೆ ತಲೆದೂಗಿದೆ

ನಮ್ಮಿಬ್ಬರ ಒಲವು.

ಆ ದೇವರು ಎದುರಾದರು

ಕೇಳುವೆ ನಾ ನಿನ್ನ

ನಿನ ಸ್ಪರ್ಶಕೆ ಆ ಹರ್ಷಕೆ

ಪರಿತಪಿಸುವೆ ಚಿನ್ನ.

ಬಾ ಬೇಗನೆ ತಡಮಾಡದೆ

ಮುಗಿಯಲಿ ಈ ಪರ್ವ

ಮುಂದೆಂದಿಗೂ ದೂರಾಗದೆ

ಜೊತೆಯಲ್ಲಿಯೇ ನಾವಿರುವ. 


Rate this content
Log in

Similar kannada poem from Romance