ಅವ್ಯಕ್ತ
ಅವ್ಯಕ್ತ
ನೀ ಬರಲಾರೆ ಎಂದು ತಿಳಿದಿದ್ದರೂ
ಕಾಯುವೆ ನಾನೆಂದೆಂದಿಗೂ ನಿನಗೆ
ಪುಸ್ತಕದಿ ಗರಿಯನಿಟ್ಟು ಮರಿಗಾಗಿ
ಕಾಯುವ ಮುಗ್ಧ ಮನಸ್ಸಿನವಳಾಗಿ.
ತಿಳಿದಿದೆ ನನಗೆ ಗರಿ, ಮರಿ ಹಾಕದೆಂದು
ಆದರೂ ಇಟ್ಟಿಹೆನದನು ಪುಸ್ತಕದಿ ಭದ್ರವಾಗಿ
ನೆನಪೆಂಬ ಗರಿ ಚದುರಿ ಹೋಗದಿರಲೆಂದು
ನಿರೀಕ್ಷೆ ಎಂಬ ಮರಿಯ ಕಾರಣವ ಕೊಟ್ಟಿಹೆನಷ್ಟೆ.
