STORYMIRROR

Lakshmi Kanth L V

Drama Romance Classics

4  

Lakshmi Kanth L V

Drama Romance Classics

ಒಲವಿನ ಹನಿ

ಒಲವಿನ ಹನಿ

1 min
393

ಹನಿಯೊಂದು ಮೂಡಿದೆ 

ರೆಪ್ಪೆ ಜೊತೆ ಮಾತಾಡುತ

ಹೃದಯವೊಂದು ಮಿಡಿದಿದೆ

ಒಲವ ಜೊತೆ ಮಾತಾಡುತ

ಕಣ್ಣ ಭಾಷೆಯೂ.... ಮಧುರ ಭಾವವೂ....


ಸುಡುವ ವಿರಹ ಬೆಂಕಿಯು

ನಿಲುಕದು ನಿನ್ನ ನೋಟಕೆ

ಮರೆತು ಮಧುರ ವೇದನೆ

ಕಾಣದು ನಿನ್ನ ಮನಸಿಗೆ

ಒಲವ ಪ್ರೀತಿಯೋ... ಬಯಕೆ ಮೋಹವೋ...


ನಡೆವ ಹಾದಿ ಮುಸುಕಿದೆ

ಚಂದ್ರನಿರದೆ ಮಬ್ಬು ಕವಿದಿದೆ

ಹೊಳೆವ ಚುಕ್ಕಿ ಮಿನುಗಿದೆ

ಪ್ರೀತಿ ಚಿಮ್ಮಿ ಉಕ್ಕಿ ಹರಿಸಿದೆ

ಕನಸೆ ಆಯಿತೋ... ಮನಸೆ ಸೋತಿತೋ...


ಹೆಜ್ಜೆ ಇಡುವ ದಾರಿಲಿ

ಮಲ್ಲೆ ಹೂವ ಹಾಸಿದೆ

ಒಲವನಿರದ ಎದೆಯಲಿ

ಪ್ರೀತಿ ಸವಿಯ ಬಡಿಸಿದೆ

ಬದುಕೆ ಕಹಿಯೋ.... ಪ್ರೀತಿ ಸವಿಯೋ....


ଏହି ବିଷୟବସ୍ତୁକୁ ମୂଲ୍ୟାଙ୍କନ କରନ୍ତୁ
ଲଗ୍ ଇନ୍

Similar kannada poem from Drama