STORYMIRROR

Lakshmi Kanth L V

Classics Inspirational Others

4  

Lakshmi Kanth L V

Classics Inspirational Others

ನೋವು ಮರೆತ ಹೃದಯ

ನೋವು ಮರೆತ ಹೃದಯ

1 min
457

ಬಿಟ್ಟುಬಿಡಬೇಕಿದೆ ಮನಸ್ಸಿನ ಭಾವವನ್ನು

ಇದ್ದರೂ ಇಲ್ಲದಿದ್ದರೂ ಕನಸು

ಎಷ್ಟೋ ನೋವುಗಳು ಕರಗಿ ಹೋಗಿವೆ

ಬಂದರೂ ಬಾರದಿದ್ದರೂ ನಲಿವು


ಮೌನದ ಮೆರವಣಿಗೆ ಹೊರಟು ನಿಂತಿದೆ

ದಾರಿಯಲ್ಲಿ ಎಲ್ಲಾ ಭಿನ್ನ ವಿಭಿನ್ನ

ಅಚ್ಚೊತ್ತಿದ ನೆನಪುಗಳು ಕಾಡ್ಗಿಚ್ಚಂತೆ ಉರಿದಿವೆ

ಬಿಡದೆ ಸುರಿದ ಮಳೆಯ ನಡುವೆ


ಕತ್ತಲಿಗೂ ಬೆಳಕಿನ ಚಿಂತೆ ಕಾಣುವ ಭಯದಲ್ಲಿ

ಕಿಂಚಿತ್ತೂ ಕರುಣೆ ಇರದ ನೆರಳ ನಡುವೆ

ಸುರಿದ ಸಾವಿನ ದಾರಿಯಲ್ಲಿ ಬದುಕೇ ಸೂತಕ

ಕನಸಿನ ಭಾವ ಮರೆತಿದೆ ನೋವಿನ ಜೊತೆಗೆ


ಹೋಗಿಬಿಡಲಿ ಎಲ್ಲವೂ ಮತ್ತೆ ಇನ್ನೆಲ್ಲವೂ

ಛಾಯೆಯೊಂದು ಮೂಡುವ ಮುನ್ನ

ನಕ್ಕುಬಿಡಲಿ ನೋವುಂಡ ಹೃದಯ ಇನ್ನಾದರು

ನೆನಪುಗಳು ಉರಿದು ಬೂದಿಯಾಗೋ ಮುನ್ನ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics