STORYMIRROR

Lakshmi Kanth L V

Tragedy Inspirational Others

4  

Lakshmi Kanth L V

Tragedy Inspirational Others

ಮುಂಗಾರು ಮೋಡ

ಮುಂಗಾರು ಮೋಡ

1 min
367

ಮುಂಗಾರು ಮೋಡ ಬಾನಲ್ಲಿ ತೇಲಿ

ಈ ನಿನ್ನ ನೆನಪು ಸುಳಿದಾಡಿತು

ಬೆಳದಿಂಗಳಾಗಿ ಒಲವನ್ನು ಚೆಲ್ಲಿ

ಆ ನಿನ್ನ ಪ್ರೀತಿ ಮರೆಯಾಯಿತು..


ಒಲವೆಂಬ ಕಂಪು ನೀ ಸೂಸಲಾರೆ

ನನ್ನಂತರಂಗದಿ ನೀ ನಿಲ್ಲಲಾರೆ

ಗೆಲುವೆಂಬ ಕನಸು ನಂದಾಗಲಿಲ್ಲ

ನಾನಿಟ್ಟ ಪ್ರೀತಿ ವಿಷವಾಯಿತಲ್ಲ..


ಕಾಲ್ಗೆಜ್ಜೆ ದನಿಯು ಎದೆಯನ್ನು ಕಲಕಿ

ಅನುರಾಗ ಚಿಮ್ಮಿ ಸುಳಿದಾಡಿದೆ

ಮೊಗ್ಗಾದ ಪ್ರೀತಿ ಹೂವಾಗಿ ಅರಳಿ

ಕಣ್ಣೀರೆ ನನ್ನ ಪಾಲಾಯಿತೆ..


ಸಿರಿವಂತನಾಗಿ ನಾ ಬೆಳೆಯಲಿಲ್ಲ

ಸಿರಿತನದ ಪ್ರೀತಿ ಮಂಕಾಯಿತಲ್ಲ

ನೆನಪೆಲ್ಲ ಸುರಿದು ಕಣ್ಣೀರು ಹರಿದು

ನಿನ್ನೆಲ್ಲ ಒಲವು ಕನಸಾಯಿತೆ..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy