STORYMIRROR

Prabhakar Tamragouri

Tragedy Classics Others

4  

Prabhakar Tamragouri

Tragedy Classics Others

ನಾ ಬರೆಯಲಾರೆ

ನಾ ಬರೆಯಲಾರೆ

1 min
296


ಈ ಹಗಲು ಈ ರಾತ್ರಿ

ಅಟ್ಟ ಹಾಸದಲಿ ಮೆರೆವಾಗ

ಬೆಳದಿಂಗಳ ಮೇಲೆ ನದಿಯ

ಜುಳು ಜುಳು ನಾದ

ನಾ ಬರೆಯಲಾರೆ


ಮಹಲು ಮಂಟಪದೆದುರು ನನ್ನವರು

ಅನ್ನದಗುಳು ಹೆಕ್ಕುತ್ತಿರುವಾಗ

ತೂಗು ಮಂಚದ ತುಂಬಾ ಮೈ 

ಹರವಿ ಮಲಗಿರುವ ರಾಜಕುಮಾರಿಯ 

ಚಿತ್ರ ನಾ ಬರೆಯಲಾರೆ


ಈ ಬರಡು ಭೂಮಿಯಲಿ

ಸುರಿವ ಮಳೆ ಹನಿಗಳನು

ರಾಕ್ಷಸ ಗಿಡಗಳು ಹೀರುತ್ತಿರುವಾಗ

ಮುಗ್ಧ ಹಸುಕಂದಮ್ಮಗಳು

ಬಂಜೆಯ ಸ್ತನಗಳಲಿ 

ಹನಿ ಹನಿ ಹಾಲಿಗೂ ಶೋಧಿಸುವ

ನಾಳೆಗಳೆದುರಿನಲಿ ಕೃಷ್ಣನ ಹಾಡು

ನಾ ಬರೆಯಲಾರೆ


ನಡೆವ ಹಾದಿಯಲಿ

ಮುಳ್ಳುಗಳು ಎದುರಾದರೂ

ಭೋಧಿ ವೃಕ್ಷದಡಿ ಶಿಲೆಯಾಗಲಾರೆ

ಮುರುಕು ಗುಡಿಸಿಲುಗಳಿಂದೇಳುವ

ಕೋಟಿ ಜನರ ಹಸಿವಿನ ಗರ್ಜನೆಗೆ

ನನ್ನ ಧಮನಿ ಧಮನಿಗಳಲಿ ಹರಿವ

ಕುದಿವ ರಕ್ತದಲಿ , ಹರಡಿರುವ

ಉರಿವ ಸೂರ್ಯನ ಸಿಡಿವ ಭ್ರೂಣದ 

ಬಸಿರು ನಾ ಬರೆಯಲಾರೆ 


Rate this content
Log in

Similar kannada poem from Tragedy