STORYMIRROR

Arjun Maurya

Romance Tragedy Inspirational

4  

Arjun Maurya

Romance Tragedy Inspirational

ಬದುಕಿದೆ

ಬದುಕಿದೆ

1 min
351

ಕಣ್ಣ ಹನಿ ಜಾರಿ

ಬೀಳುವ ಸಮಯ

ಬರಬಹುದೇನೋ ಅವಳು

ಅಂದುಕೊಂಡೆ

ಅದು ಸುಳ್ಳಾಗಿತ್ತು ll


ಪ್ರೀತಿಸುತ್ತಿದ್ದವಳು

ಇದ್ದಕ್ಕಿದ್ದಂತೆ

ಬದಲಾಗಿದ್ದಳು

ಆದರೆ ಹೃದಯ

ಕೊಟ್ಟಿದ್ದಾಳಲ್ಲ

ನನ್ನದಲ್ಲವೇ?

ಕೆಲಸದ

ಒತ್ತಡವಿರಬಹುದೇನೋ?

ಅದು‌ ಸುಳ್ಳಾಗಿತ್ತು

ನಾನೇ ಒತ್ತಡವಾಗಿದ್ದೆ ll


ಮನಸ್ಸು ಹೇಗೆ

ತಡೆದುಕೊಳ್ಳೋದು?

ಅವಳು ದೂರವಾಗುತ್ತಿದ್ದಳು

ಕೆಲನೆಪಗಳಾಧಾರದಿ..ll


ಕೊನೆಗೂ ಗಮನಿಸಲು

ಅವಳಿಗೀ ಬಾಂಧವ್ಯ

ಆಗಿತ್ತು ಹಳಸಲು ll


ಮತ್ತೆ ನಾನು?

ಬದಲಾಗಿದ್ದೆ

ಸಾಯಲಾರದೆ

ಅಮ್ಮನ‌ಮಡಿಲಿಗೊರಗಿ

ಕೊರಗಿದೆ..ll


...ಆಮೇಲೆ?

ಸಾಯಲಿಲ್ಲ

ಬದುಕಿದೆ ll


Rate this content
Log in

Similar kannada poem from Romance