STORYMIRROR

Jyothi Baliga

Romance Inspirational

4.5  

Jyothi Baliga

Romance Inspirational

ಈ ಹೃದಯ ನಿನಗಾಗಿ

ಈ ಹೃದಯ ನಿನಗಾಗಿ

1 min
25K


ಪ್ರೀತಿಯೆಂದರೆ ಬರಿಯ ಸೆಳೆತವಲ್ಲ,

ಬಾಹ್ಯ ಸೌಂದರ್ಯಕ್ಕೆ ಮರುಳಾಗುವುದಲ್ಲ

ಪ್ರೀತಿಯೆಂದರೆ ಕಣ್ಣೋಟದ ವಿನಿಮಯವಲ್ಲ

ಕದ್ದು ಮುಚ್ಚಿ ಭೇಟಿ ಮಾಡುವುದಲ್ಲ

ಪ್ರೀತಿಯೆಂದರೆ ಮೋಹವಲ್ಲ

ಆಕರ್ಷಣೆಗೆ ಒಳಗಾಗಿ ದೇಹ ಸಮರ್ಪಿಸುವುದಲ್ಲ

ಪ್ರೀತಿಯೆಂದರೆ ಜೀವನ

ಅರಿತು ಬೆರೆತು ಬದುಕು ಸವೆಸುವುದು

ಪ್ರೀತಿಯೆಂದರೆ ಕಾಳಜಿ

ಕುಂದುಕೊರತೆಗಳನ್ನು ಮನ್ನಿಸಿ ಗೌರವಿಸುವುದು

ಪ್ರೀತಿಯೆಂದರೆ ಮಾಯೆ

ಎರಡು ಪ್ರೀತಿಸುವ ಆತ್ಮಗಳ ಸಮ್ಮಿಲನವದು



Rate this content
Log in