ಆರೋಗ್ಯ
ಆರೋಗ್ಯ
ಆರೋಗ್ಯಕ್ಕಾಗಿ ವಿಧ ವಿಧದ ಡಯಟ್ಟು
ಅಡುಗೆ ಮಾಡಲು ಇವರಿಗಿಲ್ಲ ಪುರುಸೊತ್ತು
ತೆಳ್ಳಗೆ ಆಗಲು ದಿನಾ ಮಾಡುವರು ಕಸರತ್ತು
ನಾಲ್ಕು ದಿನದಲ್ಲಿ ಹೋಗುವರು ಬೇಸತ್ತು
ಜೀವನವೊಂದು ನೋವು ನಲಿವಿನ ಜಾತ್ರೆ
ಆರೋಗ್ಯವಾಗಿದ್ದರೆ ಎಲ್ಲವೂ ಸುಸೂತ್ರವೇ
ಅನಾರೋಗ್ಯವಾದರೆ ಸೇರಬೇಕಾದಿತು ಆಸ್ಪತ್ರೆ
ತಿನ್ನಬೇಕು ಕಹಿಗುಳಿಗೆ ಮದ್ದು ಮಾತ್ರೆ
ನಾಲಗೆ ರುಚಿಗೆ ಹಾಕಿ ಕಡಿವಾಣ
ಇಲ್ಲದಿದ್ದರೆ ಇಳಿವಯಸ್ಸಿನಲ್ಲೇ ಬರಬಹುದು ಮರಣ
ಆರೋಗ್ಯವಾಗಿರಲು ದಿನವೂ ಮಾಡಿ ವ್ಯಾಯಮ
ಊಟ ತಿಂಡಿಯಲ್ಲಿರಲಿ ಸಂಯಮ