ರೂಬಾಯಿಶೈಲಿ ಕವನ
ರೂಬಾಯಿಶೈಲಿ ಕವನ
ಗೋಮಾತೆ ಅನಂತ ಕೋಟಿ ವಂದನೆಗೈವೆ
ಮೂವತ್ತನಾಲ್ಕು ಕೋಟಿ ದೇವತೆ ಹೊಂದಿರುವೆ
ನಿನ್ನ ಉದರದಲಿ ಆಶ್ರಯ ಪಡೆದಿಹರು
ಪುಣ್ಯಕೋಟಿ ಪೂಜ್ಯನೀಯವಾಗಿರುವೆ
ಸಂಕಷ್ಟದಲಿ ಆಶ್ರಯದಿ ಆಶಿರ್ವದಿಸಿರುವೆ
ಸಕಲರ ಹಸಿವನು ತಣಿಸುವ ತಾಯಿಯಾಗಿರುವೆ
ಆದರದಲಿ ನಿನ್ನನ್ನು ನೋಡುವರು ಜನರು
ಪ್ರಾಣಿಗಳಲಿ ನೀನು ಶ್ರೇಷ್ಠ ತೆಯಲಿ ಇರುವೆ
ಬಣ್ಣ ಎಂತಾದರೂ ಶುದ್ದತೆ ಹಾಲು ನೀಡುವೆ
ರೈತನ ಸ್ನೇಹಿತನಾಗಿ ಆಪದ್ಭಾಂಧವನಾಗಿರುವೆ
ನಿನ್ನ ತ್ಯಾಜ್ಯಗಳಲಿ ಉಪಯೋಗಗಳುಉಂಟು
ಶಕ್ತಿ ಮುಕ್ತಿ ಯುಕ್ತಿ ದಾತೆ ನೀನಾಗಿರುವೆ
ನಿತ್ಯದಿ ದೇವರಿಗೆ ಅಭಿಷೇಕ ಪ್ರಿಯವಾಗಿರುವೆ
ಪಂಚಗವ್ಯದಿ ಆರೋಗ್ಯಕೆ ಸಹಕಾರಿಯಾಗಿರುವೆ
ಮನುಜನಿಗೆ ಉದರದಿ ಕೆಳಗೆ ಆಶ್ರಯ ಕೊಟ್ಟೆ
ಪರೋಪಕಾರಿ ಗುಣಕೆ ನೀನೆ ಸಾಟಿಯಾಗಿರುವೆ