ದೀಪಾವಳಿ
ದೀಪಾವಳಿ
ಹಣತೆಗಳ ಸಾಲಿನಲಿ
ಬೆಳಕಿನ ಜ್ಯೋತಿ ಬೆಳಗಿ
ಸಾಮರಸ್ಯ ಬೆಸೆದು
ಹಬ್ಬಿದೆ ಎಲ್ಲೆಲ್ಲೂ ದೀಪಾವಳಿ!!
ಋತುಚಕ್ರ ಉರುಳಿ
ತಮದ ಅಂಧಕಾರ ಆವರಿಸಲು
ಬೆಳಕಿನ ನಗುವ ಚೆಲ್ಲಿ
ಜಗವೆಲ್ಲವ ಬೆಳಗಿದೆ ದೀಪಾವಳಿ!!
ಮನಸಿನ ಖುಷಿಯು ತುಂಬಿ
ಕನಸಿನ ಪ್ರಭೆಯಲ್ಲಿ ಮಿಂದು
ಆಕಾಶಬುಟ್ಟಿಯ ಪ್ರಕಾಶದಿಂದ
ಬದುಕಲ್ಲಿ ನಗೆ ಬೀರಿದೆ ದೀಪಾವಳಿ!!
ಬಾಳಲ್ಲಿ ರಂಗು ಮೂಡಿಸಿ
ಸಮೃದ್ಧಿ ಸಂಪ್ರೀತಿ ತುಂಬಿ
ಹೋಳಿಗೆ ಸಿಹಿ ಯೂಟದಲ್ಲಿ
ಬೆಳಗಿದೆ ಈ ನಲ್ಮೆಯ ದೀಪಾವಳಿ!!
ಬಣ್ಣಗಳ ಚಿತ್ತಾರಲಿ ಮಿನುಗಿ
ಬೆಳಕಿನ ಹರಿಕಾರದಲಿ ಮುಳುಗಿ
ಉಲ್ಲಾಸ
ಸಡಗರದ ಸಂಭ್ರಮದಲಿ
ಕತ್ತಲೆಯ ಸರಿಸಿ ನಲಿದಿದೆ ದೀಪಾವಳಿ!!
ಕಷ್ಟ-ಸುಖಗಳ ಭಸ್ಮದಲಿ
ಬಣ್ಣಗಳ ರಂಗವಲ್ಲಿಯಲಿ
ತಳಿರು ತೋರಣಗಳಿಂದ
ಶೃಂಗಾರಗೊಂಡಿದೆ ಇಂದು ದೀಪಾವಳಿ!!
ಜಾತಿಮತವನು ತೊರೆದು
ಎಲ್ಲರೊಳಗೊಂದಾಗಿ ಕೂಡಿ
ಸಿಹಿ ತಿನಿಸುಗಳ ಹಂಚಿ
ಬಾಳಲ್ಲಿ ನವೋಲ್ಲಾಸ ತಂದಿದೆ ದೀಪಾವಳಿ!!
ಮನದ ಕಾರ್ಮೋಡ ಸರಿಸಿ
ಹರ್ಷದ ಹೊಂಬೆಳಕು ಮೂಡಿ
ನಿಷ್ಕಲ್ಮಶ ಭಾವ ತುಂಬಿ
ಮಧುರತೆಯಲಿ ಚಿಮ್ಮಿದೆ ದೀಪಾವಳಿ!!
ಒಲವಿನ ನಂದಾದೀಪದಲಿ
ಬೆಳಕು ತುಂಬಿದ ನಕ್ಷತ್ರಗಳಲಿ
ಮನೆ ಮನಗಳ ಬೆಳಗಲು
ಮತ್ತೆ ಬಂದಿದೆ ದೀಪಾವಳಿ!!
💐ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 💐