ಹಸಿರು ಕ್ರಾಂತಿ
ಹಸಿರು ಕ್ರಾಂತಿ
1 min
6
ಎಂತು ಬಣ್ಣಿಸಲಿ ನಾ ನಿನ್ನ ಸೊಬಗ
ಬರುವೆಯಾ ನೀ ಹಸಿರ ಸೀರೆ ಉಟ್ಟು
ಎಂತು ಮರೆಯಲಿ ನಿನ್ನೊಲವ ಮಮತೆ
ಮಲಗಿಸಿ ಜೋಗುಳ ಹಾಡುವೆಯಾ!!
ಜೀವದಾತೆ ನೀನಾಗಿರುವೆ ಮನುಜ ಕುಲಕೆ
ಜನ್ಮದಾತೆ ನೀನು ಪ್ರಾಣಿ ಸಂಕುಲಕೆ
ಅಮೃದಾತೆ ನೀನು ಮಳೆ ಬೆಳೆಗೆ
ಅನ್ನದಾತೆ ನೀನು ಸಕಲ ಜೀವಿಗಳಿಗೆ!!
ಮರಗಿಡ ಬೆಳೆಸಿ ಮಾಡಬೇಕು ಹಸಿರು ಕ್ರಾಂತಿ
ಹಸಿರಿಲ್ಲದಿರೆ ಉಸಿರಿಲ್ಲ ಬದುಕದು ಭ್ರಾoತಿ
ಪ್ರಕೃತಿಯೇ ನಿನ್ನೊಡಲು ತುಂಬಿದರೆ ಸಂಕ್ರಾಂತಿ
ನೆಲೆಸುವುದು ಎಲ್ಲೆಡೆಯಲ್ಲೂ ಸುಖ ಶಾಂತಿ!!
✍️ ಪುಷ್ಪ ಪ್ರಸಾದ್
