ಯಾಕೆ ಬಂದೇ......
ಯಾಕೆ ಬಂದೇ......
1 min
13
ಸೂಚನೆ ನೀಡದೆ
ಯಾಕೆ ಬಂದೇ
ನೀ ಮನಸಲಿ
ಕಾರಣ ಹೇಳದೆ
ಯಾಕೆ ಕಂಡೆ
ಮುಂಜಾವ ಕನಸಲಿ!!
ಪ್ರೀತಿಯ ಜ್ವರ
ಬರುವುದು ಸಹಜ
ಈ ಹರೆಯದಲಿ
ನನ್ನೀ ಉಸಿರೇ
ನಿನ್ನ ಹೃದಯವ
ಸದಾ ಬಯಸಲಿ!!
ನಿನ್ನೀ ಪ್ರೀತಿಗೆ
ಈ ನನ್ನ ಹೃದಯ
ಸದಾ ಸೋಲುತಿದೆ
ನಿನಗೆ ಗೊತ್ತಾಗದೆ
ನನ್ನೀ ಮನಸು
ನಿನ್ನನು ಗೆಲ್ಲುತಿದೆ!!
✍️ ಪುಷ್ಪ ಪ್ರಸಾದ್
