ಜೀವನ
ಜೀವನ
1 min
16
ಮೋಡಗಳು ಮುತ್ತಿಕ್ಕಲು
ಮಳೆ ಹನಿಗಳ ಸಿಂಚನ
ಮಳೆ ಹನಿಗಳ ಸಿಂಚನದಲಿ
ಮೈಯೆಲ್ಲಾ ರೋಮಾಂಚನ!!
ಹರಿಯುತಿದೆ ನನ್ನೆದೆಯಲಿ
ನಿನ್ನ ಪ್ರೀತಿಯ ಸಂಚಲನ
ತೆರೆದುಬಿಡಲೇ ನಾನೊಂದು
ಈ ಕ್ಷಣಗಳ ಸಣ್ಣ ಸಂಕಲನ!!
ಅಗಲದಿರು ನೀನೆಂದೂ
ನನ್ನ ಒಂಟಿ ಮಾಡಿ
ನಿನಗಾಗಿಯೆ ಮುಡಿಪಾಗಿಡುವೆ
ನನ್ನೀ ಜೀವನದ ಪ್ರತಿಕ್ಷಣ!!
✍️ ಪುಷ್ಪ ಪ್ರಸಾದ್
