ಮನದ ಕಂಪನ
ಮನದ ಕಂಪನ
1 min
17
ಮನದಲ್ಲೇನೋ ಒಂಥರಾ ಕಂಪನ
ನಿನ್ನ ಸೇರಲು ಯಾಕೋ ತವಕ
ಈ ಪ್ರೀತಿಯ ಭಾಷೆಗೆ ಏನೆನ್ನಲಿ
ಮೈಜುಮ್ಮೆನ್ನುತ ನಿನ್ನ ಮಾತಿನಲಿ!!
ನಿನ್ನ ಸ್ವರ ಕೇಳುತಿರೆ ಚೈತನ್ಯ ತುಂಬಿದೆ
ಮನವೆಂಬ ಹಕ್ಕಿ ಆಕಾಶದಿ ಹಾರಿದೆ
ತುಂಬಿದೆ ಉಲ್ಲಾಸ-ಉತ್ಸಾಹ ನನ್ನಲ್ಲಿ
ಚಡಪಡಿಸಿದೆ ಈ ಮನ ಸೇರಲು ನಿನ್ನಲ್ಲಿ!!
ಪ್ರೀತಿಗೆ ಸಿಕ್ಕಿದೆ ನಗುವಿನ ಆನಂದ
ತೆರೆದಿಟ್ಟಿದ್ದೇನೆ ಹೃದಯ ಕದವ ನಿನಗಾಗಿ
ಹೊಳೆ ಹರಿದು ಸೇರುವಂತೆ ಸಾಗರ
ಒಲವಿಂದ ಬಂದು ಸೇರು ನನಗಾಗಿ!!
✍️ ಪುಷ್ಪ ಪ್ರಸಾದ್
