ಇರಲಿ ಬರಹಕ್ಕೊಂದು ಮೆಚ್ಚುಗೆ
ಇರಲಿ ಬರಹಕ್ಕೊಂದು ಮೆಚ್ಚುಗೆ
1 min
194
ಬರೆಯುವ ಕೈಯನು
ಮುರಿಯಬೇಡ ಓ ಮನುಜ
ಇಷ್ಟಪಟ್ಟ ಹಾಗೆ ಬರೆಯಲು
ಬಿಡು ಅದನು ಓ ವನಜ!!
ಮನಸಿನ ಭಾವನೆಗಳ
ಅರ್ಥೈಸುವ ಭಾವವಾಗು
ಮುಗ್ದ ಹೃದಯದ ಅಳಲ
ಅರಿತು ಬಾವುಕನಾಗು!!
ನಿನ್ನ ಸ್ವಾರ್ಥಕೆ ಬೇರೆ ಮನಸ
ನೊಯಿಸದೆ ಕರುಣಾಮಯಿಯಾಗು
ಬರೆಯುವವರ ಬಗ್ಗೆ ಅವಹೇಳನ
ಮಾಡದೆ ಪ್ರೋತ್ಸಾಹ ಕೊಡುವಂತಾಗು!!
ನಿನ್ನ ಸಂತಸದಿ ಬೇರೆಯವರ
ವೇದನೆಯ ಮರೆಯದಿರು
ಬೇರೆಯವರ ಸಂತಸವ
ನೋಡಿ ನೀನೆಂದೂ ಕೊರಗದಿರು!!
ಎಲ್ಲಾ ಜೀವಕು ಸ್ಪಂದಿಸುವ
ಒಲವನು ನೀನೆಂದೂ ಬಿಡದಿರು
ಬರಹಕ್ಕೊಂದು ಮೆಚ್ಚುಗೆಯ
ಕೊಡಲು ನೀ ಮರೆಯದಿರು!!
✍️ ಪುಷ್ಪ ಪ್ರಸಾದ್
