ಅಂತರಂಗದ ತುಮುಲ
ಅಂತರಂಗದ ತುಮುಲ
ಮಳೆ ಬರುವ ಹೊತ್ತು ಮಾತಿಗೇನು ಗೊತ್ತು ?
ಪದಪುಂಜಗಳ ಸುತ್ತು ಬರೆಯಿಸಿ ಕಿಮ್ಮತ್ತು
ಮಳೆ ಹನಿಯ ಗಮ್ಮತ್ತು ಉಂಡವರಿಗೆ ಗೊತ್ತು
ಕೈ ಹಿಡಿದ ಮನಸುಗಳ ಮೌನದ ಪಿಸುಮಾತು!!
ಅಂತರಂಗದ ತುಮುಲ ತುಂತುರಾಗುತ ಕ್ಷಣ
ಉನ್ಮಾದದಲಿ ತೇಲುವ ಮನದ ತಲ್ಲಣ
ಯಾಕೊ ಸಂಭ್ರಮದ ಉತ್ಸವ ಮಬ್ಬಾಗಿ
ಕರಿಮುಗಿಲು ಸಂಜೆಗತ್ತಲೆಯ ಕೊಡೆಯಂತಾಗಿ!!
ತಟ್ಟನೆ ಬಡಿದ ರೋಷಕ್ಕೆ ಕಾರಣವೇನೋ ಜಗದೀಶ
ಕೊಂಬೆ ರೆಂಬೆಗಳ ಮುರಿತ ಬಿಡದೇನು ಅವಶೇಷ
ಸುತ್ತೆಲ್ಲಾ ಸ್ಥಬ್ದ ಗಾಳಿಯ ಬೀಸುತಿಹ ವರ್ಷ ಕಾರಣ
ಹೃದಯದಲೇನೋ ಪುಳಕ ಬೆಚ್ಚಗಾಗಿ ಭಾವನಾ!!
ಇಳಯು ಅತ್ತು ಕರೆದರೂ ಮಳೆಯ ಅನವರತ
ಮೃದುವಾಗಿ ಮೆಲ್ಲನೆ ನೀರ ತೊಟ್ಟಿಯಲಿ ಬಂಧಿಸುತ
ಗಾಳಿಯಲಿ ತೇಲತ ಭಾವನೆಗಳ ವಿಹಾರ
ಮನದ ನೌಕೆ ಸಾಗಲಿ ಸಪ್ತ ಸಾಗರದಾಚೆ ದೂರ!!
✍️ ಪುಷ್ಪ ಪ್ರಸಾದ್
