STORYMIRROR

Pushpa Prasad

Others

4  

Pushpa Prasad

Others

ಬೆಂಕಿ ಹೂ

ಬೆಂಕಿ ಹೂ

1 min
11

ಬಂಧುತ್ವವನ್ನು ಸಂಬಂಧಗಳಲಿ 
ಬೆಂದು ಬೆಸೆಯುವ ಬಡತನದ ಬಂಧಿ ನಾನು
ನೊಂದು ನಂದಿರುವ ನೂರಾರು ನೊಂದ ಮನಗಳ
ಕಂದೀಲಿನಲಿ ಮಿಂಚಿ ಬೆಳಗಿದ ಜ್ಯೋತಿ ನಾನು!!

ಅಂದಿನಿಂದ ಹಿಡಿದು ಇಂದಿನ ತನಕವೂ 
ಮುಂದಿನ ದಿನಗಳಲ್ಲೂ ಅರಳುವ ಹೂ ನಾನು
ಹೊಂದಿ ಬದುಕುವ ಸಮಾಜದ ಪರಿಧಿಯಲಿ 
ನೊಂದು ಬೆಂದಿರುವ ಸುಮವು ನಾನು!!

ಕಂಬಳಿ ಹೊದ್ದು ಮಲಗಿ, ಎದ್ದು-ಗೆದ್ದು ಬೀಗಲು
ಬಿದ್ದು ಎದ್ದಿರುವ ಬುದ್ದು-ಪೆದ್ದು ನಾನು
ಮದ್ದು ಮೆದ್ದಿರುವ ರದ್ದಿ ಕಾಗದದ
ಹಳೆಯದಾದ ಹಳತು ಸುದ್ದಿ ನಾನು!!

ನಾಳೆಯ ಕನಸುಗಳ ಹಸಿ ಮುನಿಸುಗಳ
ಚುಚ್ಚಿ ಕೊಂದಿರುವ ದೇಹ ನಾನು
ಸಿಡಿಲ ಸಿಡಿತಕೆ ಮುಗಿಲ ಮೊರೆತಕೆ
ಸಿಡಿದು ಬೀಳಿಸುವ ದ್ವನಿಯು ನಾನು!!

ಅಜ್ಞಾನದ ಬೆಳಕಿನಲಿ ಜೀತದಾಳಾಗಿ 
ದುಡಿದು ಜೋತು ಜೀಕುವ ಜ್ವಾಲೆ ನಾನು
ಜಗದ ದುಗುಡವ ದೂರ ದೂಡುವ
ಜಾಗೃತ ಮನಸಿನ ಬೆಂಕಿ ಹೂ ನಾನು!!

✍️ ಪುಷ್ಪ ಪ್ರಸಾದ್ 


Rate this content
Log in