STORYMIRROR

Pushpa Prasad

Others

4  

Pushpa Prasad

Others

ಕೊನೆಯ ಕ್ಷಣ

ಕೊನೆಯ ಕ್ಷಣ

1 min
16

ಕೊನೆಯ ಕ್ಷಣ 

ದೈವವಿತ್ತ ಬದುಕು ಇದುವು
ತಿಳಿಯದು ವಿಧಿಯ ಆಟವು
ಇರುವಷ್ಟು ದಿನ ಮಾತ್ರ ಸುಖ-ಸಂತಸವು
ಇಲ್ಲ ಇವರಿಗೆ ಬೇರೆ ವೈಭವವು!!

ಜೀವ ಉಳಿಸಲು ಹಗಲು ರಾತ್ರಿ ಹೋರಾಟ
ಆಸ್ಪತ್ರೆಗಳಿಗೆ ನಿತ್ಯವೂ ಬಿಡುವಿಲ್ಲದೆ ಅಲೆದಾಟ
ಮಗ ಬದುಕುಳಿಯಬಹುದೆಂದು ಭರವಸೆಯ ನೋಟ
ದೇವರೇ.. ಏನಿದು ನಿನ್ನಯ ಆಟ?

ಕೊನೆಗೆ ದಯಾಮರಣದ ಆದೇಶವು 
ಈಗ ತೀರ್ಪು ದೊರೆತುದೇ ಅಮೂಲ್ಯವು
ಮಲಗಿದಲ್ಲೇ ಕಣ್ಣುಗಳ ಪಿಳಿ ಪಿಳಿ ನೋಟವು
ಖುಷಿಯ ಕಾಣದ ಜೀವವು!!

ಕರುಣೆ ತೋರದ ದೇವರು
ನಿಂತಿತು ಶಾಶ್ವತವಾಗಿ ಉಸಿರು 
ಕ್ಷಮಿಸುತ್ತಾ ಕಳಿಸಿ ಕೊಟ್ಟರು ಹೆತ್ತವರು
ಮುಗ್ಧತೆಯ ಲೋಕದಲಿ ಬರಿದಾದ ಇವರು!!

✍️ ಪುಷ್ಪ ಪ್ರಸಾದ್ 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ