ಜೀವನವೇ ಒಂದು ಉಡುಗೊರೆ
ಜೀವನವೇ ಒಂದು ಉಡುಗೊರೆ
1 min
19
ಭಾವ-ಬಂಧ ಬೆಸೆದಿರುವಾಗ
ಮನದಿ ವಿಚಾರವೊಂದು ಮೇಳೈಸಿ
ಮಿಂಚಿನ ನಕ್ಷತ್ರವೊಂದು ಬಳಿ ಬಂದಿದೆ
ಹರುಷದ ಹೊನಲು ಹರಿದು
ಮೈ ಮನವೆಲ್ಲಾ ಮರೆತಿದೆ!!
ಬೆಳಕೊಂದು ಮೂಡುತಿರಲು
ಹೂ ಹಣ್ಣುಗಳಿಂದ ಶೃಂಗಾರಗೊಂಡಿದೆ
ಇಬ್ಬನಿಯು ತಂಪೆರೆದು ಮುತ್ತಿಡುತ್ತಿರಲು
ಸಂಭ್ರಮ ತುಂಬಿ ತುಳುಕಿ
ಲೋಕವನ್ನೇ ಮರೆಯುತಿದೆ!!
ಸಿಹಿಯ ಆಲಾಪವೊಂದು ಸುಳಿದಿರಲು
ಒಲವು ಚಿಮ್ಮಿ ಹರಿಯುತಿದೆ
ಸಂತಸವು ಉಕ್ಕಿ ಹರಿಯುತಿರಲು
ಜೀವನವೇ ಒಂದು ಉಡುಗೊರೆಯಾದಂತಿದೆ
ಮನಸು ವಿಜೃಂಭಣೆಯ ಆಚರಿಸುತಿದೆ!!
✍️ ಪುಷ್ಪ ಪ್ರಸಾದ್
