ಹುಸಿಮುನಿಸು
ಹುಸಿಮುನಿಸು
ರಂಗೇರಿದ ಮೊಗದೊಲ್ಲೊಂದು
ತುಟಿಯಂಚಲಿ ಮೂಡದ ಮುಗುಳ್ನಗೆಯೊಂದು!!
ಕಾಣುತ್ತಿದೆ ಬಿರುಸಾದ ಹುಸಿಮುನಿಸು
ಪ್ರಿಯೇ ನೀನೀಗ ನೋಡಲೆಂತ ಸೊಗಸು!!
ಕೆಂದಾವರೆಯಂತ ಕೆನ್ನೆಯ ಮೇಲೆ
ಕಣ್ಣಿಂದ ಜಾರಿದ ಹನಿಯ ಲೀಲೆ!!
ಬಿಂಬವಾಗಿ ನಾನಿದ್ದೆ ಆ ಹನಿಯಲ್ಲಿ
ಹೂವಿನ ಎಸಳಂತೆ ಜಾರಿಬಿತ್ತು ನನ್ನ ಅಂಗೈಲಿ!!
ಬೊಗಸೆಯಲ್ಲಿ ಹಿಡಿದಿಟ್ಟ ಕಣ್ಣೀರ ಹನಿಯ
ನನ್ನೆದೆಯ ಚಿಪ್ಪಲ್ಲಿಟ್ಟು ಚುಂಬಿಸುತ!!
ಪ್ರೀತಿಯ ಉಡುಗೊರೆಯ ನೀಡುವೆ ಕಣೆ
ಮುನಿಸಿನ ಮೊಗದ ಮೇಲೆ ನಗುವ ಮೂಡಿಸುವಾಸೆ ಕಣೆ!!
✍️ ಪುಷ್ಪ ಪ್ರಸಾದ್

