Rashmi R Kotian

Romance

4.3  

Rashmi R Kotian

Romance

ಯಾರೋ ನೀ ಎನಗೆ

ಯಾರೋ ನೀ ಎನಗೆ

1 min
2.1K


ಯಾರೋ ನೀ ಎನಗೆ?

ಏಕೆ ನನ್ನ ಮನವ ಕಾಡುತ್ತಿರುವೆ ಹೀಗೆ?

ಬೇಡ ಈ ಹೃದಯಕೆ ನಿನ್ನ ಮೇಲೆ ಸಲಿಗೆ,

ಮಾಡಬೇಡ ನೀ ಅದರ ಸುಲಿಗೆ.


ನಿನ್ನ ನೋಡಲೇಕೆ ನನ್ನಲ್ಲಿ ಪ್ರತಿಕ್ಷಣ ಕಾತರ?

ನೋಡದಿದ್ದರೇಕೆ ಆಗುವುದೆನಗೆ ಬೇಸರ?

ನೋಡಿದರೆ ನಿನ್ನ ಆಗುವುದೆನಗೊಂದು ಭಾವ ಮಧುರ,

ನಿನಗೂ ಆಗುವುದೇ ಈ ಥರ?


ಹೃದಯದ ಬಾಗಿಲ ಬಳಿ ಬಂದು ಬಡಿಯುತ್ತಿರುವೆ ನೀ ಏಕೆ?

ಹುಟ್ಟಿಸುತ್ತಿರುವೆ ಏಕೆ ನನ್ನಲ್ಲಿ ನಿನ್ನ ಪ್ರೀತಿಯ ಬಯಕೆ?

ಆಗುವುದೀಗ ಮನದಿ ಪ್ರತಿಕ್ಷಣ ನಿನ್ನ ಹೆಸರ ಕನವರಿಕೆ,

ನಿವೇದಿಸಿದರೆ ಈ ನನ್ನ ಪ್ರೇಮವ ನಗುವೆಯಾ ನೀ ಹಾಕಿ ಕೇಕೆ?


ಈ ಸರಳ ರೂಪಿಯ ನೀ ಒಪ್ಪುವಿಯೇನು?

ತುಂಬುವೆಯಾ ಈ ಒಂಟಿ ಹೃದಯಕೆ ಪ್ರೀತಿ ಜೇನು?

ನನ್ನೀ ಪ್ರಶ್ನೆಗೆ ನಿನ್ನುತ್ತರವೇನು?

ಬೇಗ ಬಂದು ಹೇಳು ನೀ ನಾ ಕಾಯುತ್ತಿರುವೆನು.



Rate this content
Log in

Similar kannada poem from Romance