ಏಕಮುಖ ಪ್ರೇಮಿ
ಏಕಮುಖ ಪ್ರೇಮಿ
"ನಿನ್ನ ಪ್ರೀತಿಸದವನ ನೀ ಏಕೆ ಪ್ರೀತಿಸುವೆ?
ಎಂದು ನುಡಿದಿದ್ದಾಗ ನಾನು ಮಾತು ಖಾರ,
ಅವಳೆಂದಿದ್ದಳು ,
"ಕೇಳು ಗೆಳತಿ,
ನನ್ನ ಪ್ರೀತಿಯಲ್ಲ ವ್ಯವಹಾರ.
ನನ್ನ ಪ್ರೀತಿ ಮಮಕಾರ.
ಕಂದಮ್ಮ ಪ್ರೀತಿಸದಿರೆ ನಾ ಪ್ರೀತಿಸಲಾರೆ
ಎಂದು ತಾಯಿ ಮಾಡುವಳೋ ಉದ್ಗಾರ?
ಈ ಪ್ರಶ್ನೆಗೆ ನನ್ನಿಂದ ನೀಡಲಾಗಿರಲಿಲ್ಲ ಉತ್ತರ.
ಮತ್ತವಳೆಂದಿದ್ದಳು,
"ಅಂತೆಯೇ ನನ್ನ ಅವನಲ್ಲಿನ ಪ್ರೀತಿ ನಿರಂತರ,
ಹೀಗೆಯೇ ಪ್ರತಿಫಲ ಬಯಸದೆ ಪ್ರೀತಿಸಿದ್ದಳು
ಮುರಾರಿಯ ಮೀರಾ.
ಅವನಲ್ಲದೆ ಬೇರೆ ಯಾರಿಗೂ ತೆರೆದಿಲ್ಲ
ನನ್ನೀ ಹೃದಯ ದ್ವಾರ
ಇದು ನನ್ನ ಪ್ರೀತಿಯ ಸಾರ.
ಕೇಳು ಗೆಳತಿ ನನ್ನ ಪ್ರೀತಿಯಲ್ಲ ವ್ಯವಹಾರ,
ನನ್ನ ಪ್ರೀತಿ ಮಮಕಾರ."