ಪ್ರಶ್ನೋತ್ತರ
ಪ್ರಶ್ನೋತ್ತರ
ಹೃದಯ ಎಲ್ಲಿದೆ ಯಾರಾದರೂ ಹೇಳ್ತೀರಾ
ಯಾಕೆ ಈ ಹೃದಯದಲ್ಲಿ ನೋವು ಅಂತಾರೆ
ಹೃದಯಕ್ಕೆ ಬಾಣ ಬಿಟ್ಟು ಮತ್ತೇಕೆ ಕೇಳ್ತಿರಾ
ಹೃದಯ ಎಲ್ಲಿದೆ ಅದರ ನೋವು ಎಲ್ಲಿದೆ
ರಾತ್ರಿ ಕಣ್ಣಿನಿಂದ ನಿದ್ದೆ ಹಾರಿ ಹೋಗುವದೇಕೆ
ಕಣ್ಣು ಅದಕ್ಕೆ ಜಾಗ ಕೊಡೋದಿಲ್ಲ ಅದಕೆ
ನಿಜವಾದ ಪ್ರೀತಿ ಹುಟ್ಟುವದು ತಿಳಿಯೋದುಹೇಗೆ
ಪ್ರಿಯಕರ ಹತ್ತಿರದಲ್ಲಿಲ್ಲದಾಗ ಅವನ ಬರುವಿಕೆಗೆ
ಹೃದಯ ಗಾಬರಿಗೊಂಡು ಡವಡವ ಅನ್ನುವದೇಕೆ
ತಿಳಿಹೇಳಿ ನಿಮ್ಮವನು ನಿಮ್ಮಹೃದಯಲ್ಲಿರುವದಕೆ
ಅವನಿಲ್ಲದಿದ್ದರೂ ಏನೋ ವಿರಹದ ನೋವೇಕೆ
ಅದಕ್ಕೆ ಹೇಳೋದು ಪ್ರೀತಿಯು ಬಿಡಿಸದಬಂಧ