STORYMIRROR

Ananth Singanamalli

Romance Tragedy

3  

Ananth Singanamalli

Romance Tragedy

ಮಳೆ, ಕಾಫಿ, ಜೊತೆಯಲಿ ನೀನು

ಮಳೆ, ಕಾಫಿ, ಜೊತೆಯಲಿ ನೀನು

1 min
99

    


ಮಳೆ ಮಳೆ ಮಳೆ..... 

ಕಾಫಿ ಕಾಫಿ ಕಾಫಿ..... 

ನೀನು ನೀನು ನೀನು.... 


ಜೊತೆ ಜೊತೆಯಾಗಿ ಹೀರಿದ 

ಆ ಕಾಫಿ ನೆನಪಿದೆಯಾ ನಿನಗೆ 

ಆಹಾ! ಏನು ಘಮ ಘಮ ಪರಿಮಳ 

ಕಪ್ಪು ಒಂದೇ, ಸಿಪ್ ನನ್ನದು ನಂತರ ನಿನ್ನದು 


ಆ ತುಂತುರು ಮಳೆ ಹನಿ ಮುಂಗುರುಳಿಂದ 

ಜಾರಿ ನನ್ನಧರ ತಾಗಿ ಕಾಫಿಯಂತೆ ಘಮಘಮ 

ತುಂತುರು ನಿನ್ನ ಪ್ರೀತಿ ಹಾಡು, ನನ್ನೆದೆಯ ಕಂಪನ 

ಒಹ್ ಇದುನನ್ನ ನಿನ್ನ ಆ ದಿನಗಳ ರೋಮಾಂಚನ!


ಅದೇ ಮಳೆಗಾಲದ ಒಂದು ದಿನ......... 

ಮತ್ತೆ ಜೋರು ಮಳೆ,ಗಾಳಿ, ಚಳಿ ಕಾಫಿ ಇಲ್ಲ..

ಅವಸರ ಆತುರ, ಕಾಫಿ ಬಂದಿತೆಂಬ ಕಾತುರ 

ಕೇಳಿತು ಕಾಫಿ ಕಪ್ ಹಿಡಿದ ಕೈಬಳೆಗಳ ಝೇಂಕಾರ 


ಕಾಫಿ ಜೊತೆ ಬಸಿಯಲ್ಲಿ ಒಂದು ಬಣ್ಣದ ಕಾಗದ 

ಒಂದು ಸಿಪ್ ಎಳೆದೆ ಕಾಗದದಬರೆಹ ಸೀಳಿತುಎದೆ

"ನಿಮ್ಮೊಡನೆ ಬಾಳಲು ನಂಗಿಷ್ಟವಿಲ್ಲ.

ಡಿವೋರ್ಸ್ ಬೇಕು, ಬಿಡುಗಡೆಯ ಬೇಡಿ 


ಕಳಚಿ ಬಿಡಿ. ಕಾರಣಕೇಳಬೇಡಿ"ಹೊರಟೇಬಿಟ್ಟಳು  

ಆ ಮಳೆಯಲ್ಲಿ ನನ್ನ ಕಣ್ಣ ಹನಿ ಅವಳಿಗೆಕಾಣಲಿಲ್ಲ  

ಗಹಗಹಿಸಿ ನಕ್ಕೆ ವಿಷಾದದ ನಗೆ....

ಈ ಮಳೆ, ಈ ಕಾಫಿ, ಈ.... ಜೊತೆಯಿಲ್ಲದ ಜೊತೆ

ಎಲ್ಲ ಶೂನ್ಯ.. ಶೂನ್ಯ... ಶೂನ್ಯ.

       


Rate this content
Log in

Similar kannada poem from Romance