ಮಳೆ ಸುರಿದರೂ ತೀರದ ದಾಹ
ಮಳೆ ಸುರಿದರೂ ತೀರದ ದಾಹ
ನನ್ನ ನಯನಗಳು ಕಣ್ಣೀರಿನ ಮಳೆಸುರಿಸುತಲಿವೆ
ಆದರು ನನ್ನ ತನುಮನ ದಾಹದಿಂದ ಬಳಲುತಿವೆ
ಮಾತು ತುಂಬಾ ಹಳೇದು ಕಥೆ ಕೂಡ ಹಳೆಯದು
ಮರೆತೆಯ ಮಳೆಯಲಿ ಜೋಕಾಲಿ ಆಡಿದುದು
ಋತುಗಳು ಬರುತ್ತವೆ ಋತುಗಳು ಹೋಗುತ್ತವೆ
ಹಳೆ ನೆನಪು ತಂದು ಸುಳ್ಳು ಭರವಸೆ ನೀಡುತ್ತವೆ
ಎಷ್ಟು ನಂಬಿದರೂ ನನ್ನ ಮನ ಬಾಯಾರಿಸಿದೆ
ಸಂತಸದ ವರ್ಷಧಾರೆ ಸುರಿದು ದಾಹ ತಿರುವದೆ
ವಸಂತಗಳೆ ಕಳೆದಿವೆ ನನ್ನ ನಿನ್ನ ಮಿಲನದ ಗಳಿಗೆ
ಗಗನದಲ್ಲಿ ನಕ್ಷತ್ರಗಳಾಗಿ ಮಿಂಚಿ ಮೋಡಗಳಾಗಿ
ಕಳೆದ ದಿನಗಳ ಹೆಜ್ಜೆ ಮುಚ್ಚಿದ್ದು ನಾ ನೋಡಿ ಅತ್ತೆ
ಕನವರಿಸಿದೆ ಸುಖ ಕ್ಷಣಗಳ ವಿರಹವೇದನೆ ಗೊತ್ತೆ
ಹೇಗೊ ಮರೆತು ಸ್ವಲ್ಪ ಸಮಾಧಾನವೆನಿಸಿದರು
ದಾಹ ತೀರದೆ ಮನವಾಗಿದೆ ನೀರಿಲ್ಲದ ಬಂಜರು