"ಪ್ರೀತಿಯ ಕಾರಣ"
"ಪ್ರೀತಿಯ ಕಾರಣ"


ಕಾರಣವೆ ಬೇಕಿಲ್ಲ ಈ ಪ್ರೀತಿಗೆ
ಮನದಲ್ಲಿ ನೀ ಬಂದ ಈ ರೀತಿಗೆ
ಎದೆ ಬಡಿತವೊಂದೆ ಆಧಾರವು
ಹೋಗದಿರು ಎಂದೆಂದೂ ನೀ ದೂರವು
ಇದುವರೆಗೂ ಇರಲಿಲ್ಲ ಪ್ರೀತಿಸುವ ಉದ್ದೇಶ
ನೀ ಬಂದ ಕ್ಷಣದಿಂದ ಮನದಲೇನೊ ಆವೇಶ
ಹೃದಯದ ಬಡಿತ ನನ್ನ ಕೈ ತಪ್ಪಿದೆ
ನನಗರಿಯದೆ ನಿನ್ನ ಬಿಗಿದಪ್ಪಿದೆ
ನಿನಾದರು ಬಂದೊಮ್ಮೆ ಹೇಳು ಕಾರಣ
ನನಗರಿಯದ ಆ ಸಿಹಿ ಹೂರಣ
ಹೃದಯವ ಕೇಳಿದೆ ಎನು ಕಾರಣ
ಕಣ್ಹ್ ಹೊಡೆದು ನಕ್ಕಿತು ವಿನಾ:ಕಾರಣ