STORYMIRROR

Mouna M

Romance Classics Others

2.5  

Mouna M

Romance Classics Others

ಇನಿಯ

ಇನಿಯ

1 min
598


ಇವನೇ ನನ್ನ ಇನಿಯ, ನಾನಿಲ್ಲ ಇವನಿಗೆ ಸನಿಹ 

ಪ್ರೀತಿ ಗೊತ್ತಿಲ್ಲ ಮಾತು ಬಲ್ಲವನಲ್ಲ ನನ್ನ ನಲ್ಲ 

ಆದ್ರೂ ಯಾಕೋ ಗೊತ್ತಿಲ್ಲ ಇವ ನನ್ನವ 


ಕೋಪ ಬಂದ್ರೆ ಅಷ್ಟೇ ಅದಕಿಲ್ಲ ಪರಾಕಾಷ್ಠೆ 

ಪ್ರೀತಿ ತೋರಿಸೋಕೆ ಬರೋಲ್ಲ ಅಷ್ಟೇ 


ಬಲ ಭೀಮ ಎನ್ನುವದರಲ್ಲಿ ಮಾತೆರಡಿಲ್ಲ 

ಹಗಲು ರಾತ್ರಿ ಎನ್ನದೆ ದುಡಿವವನಲ್ಲ ನನ್ನ ನಲ್ಲ 


ನಿದ್ದೆ ಭೂಪನು ಇವನು ಕುಂತಲ್ಲೇ ಮಲಗುವನು 

ಮಡದಿ ಮಕ್ಕಳು ಬೇಡ ಕಾಯಕವೇ ಎನಗೆ ಕೈಲಾಸವೆನುವನು .. 


ತಂದೆ ತಾಯಿಯ ಮುದ್ದು ಮಗನಿವ, ಇವನಿಗಿಲ್ಲ ಯಾರ ಹಂಗು

ನೆಂಟರ ನಂಟು ಬೇಡ ಇವಗೆ , ಬಂದರೆ ಅವರು ಮನೆಗೆ 


ತಾನೇ ಆಗುವ ಮನೆಗೆ ಅತಿಥಿ, ಅವರು ಹೋಗುವುದೇ ಕಾಯ್ವ 

ನನ್ನ ನಲ್ಲ,

ಮಾಡಿ ಅತಿಥಿ ಆಥಿತ್ಯ ಸರಿ ಎನಿಸಿಕೊಳ್ಳುವವ 


ಮಾಡುವ ಕೆಲಸದಲ್ಲಿ ಅಚ್ಚುಕ್ಕಟ್ಟು, ಮಾಡದಿದ್ದವರ ಮೇಲ್ಯಾಕೆ ಸಿಟ್ಟು 

ಬಲ್ಲಿರಾ ನನ್ನ ಇನಿಯನ ಪ್ರೀತಿಯ ಗುಟ್ಟು?


ಮನದಲ್ಲೇ ಪ್ರೀತಿ ತುಂಬಿಕೊಂಡು ಹೊಟ್ಟೆ ತುಂಬಾ ಉಂಡು 

ಮರುಗುವ ಇವ ಬಡವ ಬಲ್ಲಿದವರ ಕಂಡು 


ಮನದಲ್ಲಿ ಆಸೆಯಿಲ್ಲ, ಹಾಸಿಗೆ ಇದ್ದಷ್ಟು ಕಾಲು ಚಾಚಿ 

ನೇರ ನಡೆ ನುಡಿಯಿಂದ ಮನದಿ ಕಲ್ಮಶವ ಕಳಚಿ 


ನನ್ನ ಇನಿಯನಾದ ಇವನಿಗೆ ನಾನ್ ಸರಿಸಾಟಿಯಲ್ಲ 

ಇವನೇ ನನ್ನ ಇನಿಯ, ನಾನಿಲ್ಲ ಇವನಿಗೆ ಸನಿಹ 

ಪ್ರೀತಿ ಗೊತ್ತಿಲ್ಲ ಮಾತು ಬಲ್ಲವನಲ್ಲ ನನ್ನ ನಲ್ಲ 

ಆದ್ರೂ ಯಾಕೋ ಗೊತ್ತಿಲ್ಲ ಇವ ನನ್ನವ 

ಕ್ಷಮೆ ಇರಲಿ ಗೆಳೆಯ, ಬರುವೆಯಾ ನನ್ನ ಸನಿಹ?


 


Rate this content
Log in

Similar kannada poem from Romance