ಕ್ಷಮೆ ಇರಲಿ ಅಮ್ಮ.... !!
ಕ್ಷಮೆ ಇರಲಿ ಅಮ್ಮ.... !!
ಕ್ಷಮೆ ಇರಲಿ ಅಮ್ಮ.... !!
ನಾ ನಿನ್ನ ಹೊಟ್ಟೆಯಲ್ಲಿರುವಾಗಲೂ ನಿನ್ನ ಊಟವನ್ನು
ಒಂದು ಚೂರು ಬಿಡದೆ ನನಗೆ ಕೊಟ್ಟೆಯಾಕೆ ಅಮ್ಮ?
ಈಗ ನೀ ಕೇಳಿದರೂ, ಕೇಳದಿದ್ದರೂ ನಾ ನಿನಗೆ ಉಣಬಡಿಸಲಿಲ್ಲ
ಇದೆಲ್ಲ ನಾ ಹೇಗೆ ಮರೆತೆನಮ್ಮ, ಕ್ಷಮೆ ಇರಲಿ ಅಮ್ಮ!!
ನಿನ್ನ ಮದುವೆಯ ಸೀರೆಯನ್ನರಿದು ನನಗೆ ಅರಿವೆಯನ್ನು ಹೊಲಿಸಿದಿ
ಅದೂ ನನ್ನ ಕಣ್ಣಿಗೆ ಕಾಣದಾಗಿ, ಕೊಡಿಸಲಿಲ್ಲ ನಾ ನಿನಗೆ ಹೊಸ ಗಾದಿ !!,
ನನ್ನ ಕಣ್ ಕೆಂಪಾದಾಗ, ನಿನ್ನ ಕಣ್ಣೇ ಕೆಂಪಾದ ಹಾಗೆ ಅತ್ತು ಕರೆದಿದ್ದೆ
ಅದೆಲ್ಲ ಮರೆತ ನಾ ಕೊಡಿಸಲಿಲ್ಲ ನಿನಗೆ ಕನ್ನಡಕ, ಕ್ಷಮೆ ಇರಲಿ ಅಮ್ಮ!!
ನಾ ಕೇಳಿದರೂ ಕೇಳದಿದ್ದರೂ, ಅಪ್ಪನಿಗೂ ಗೊತ್ತಾಗದೆ ಹಾಗೆ
ಖರ್ಚಿಗೆ ಹಣ ಕೊಟ್ಟು ಹಣೆಯ ಮೇಲೆ ಇಟ್ಟಿ ಮುತ್ತಿನ ಬೊಟ್ಟು !
ಖಾಲಿಯಾದ ನಿನ್ನ ದುಡ್ಡಿನ ಕೈ ಚೀಲವನು ನೋಡಿಯೂ ನೋಡದಿದ್ದ
ಎನಗರಿಯದಾಯಿತೇ ಈ ನಿನ್ನ ಮೌನದ ಗುಟ್ಟು ಕ್ಷಮೆ ಇರಲಿ ಅಮ್ಮ...
ನನಗಾಗಿ ಕೊಟ್ಟ ನಿನ್ನ ಆಭರಣದಿಂದ ಕಟ್ಟಿಸಿದೆ ನಾ ನನಗೊಂದು ಸೂರು
ಊರು ಬಿಟ್ಟ ನಿನ್ನ ಓಲೈಸದೆ, ನೋಡಲಾರದೆ ಇದ್ದೆ ನಾ ನಿನ್ನ ಕಣ್ಣೇರು..
ಇದ್ದಾಗ ಅರಿಯಲಿಲ್ಲ ನಾ ನಿನ್ನ, ಇನ್ನು ನೀ ಹೋದ ಮೇಲೆ
ಏನರಿತರೇನು ಫಲ, ಬರುವೆಯಾ ನನ್ನ ಮಗಳಾಗಿ ಈ ಸಲ
ಆಗಲಾದರೂ ಪ್ರಯತ್ನಿಸುವೆ ತೀರಿಸಲು ನಿನ್ನ ಸಾಲ!!!!
ಕ್ಷಮೆ ಇರಲಿ ಅಮ್ಮ, ಕ್ಷಮೆ ಇರಲಿ....
