STORYMIRROR

Kavya Poojary

Tragedy Others

4  

Kavya Poojary

Tragedy Others

ಗೆಳತಿ

ಗೆಳತಿ

1 min
219

ಕಾರಣ ಹೇಳದೆ ದೂರಾಗ ಹೊರಟೆಯಾ ಗೆಳತಿ

ಬರೆಯುವ ಕವಿತೆಗೆ ಬೇಕಿದೆ ನಿನ್ನಯ ಅನುಮತಿ

ಇನ್ನೆಂದೂ ತಪ್ಪಿಯೂ ಮೀರದು ನನ್ನಯ ಇತಿ-ಮಿತಿ

ಅರಳಿದ ಸುಂದರ ಬಂಧಕೆ ಹಾಡದಿರು ಇತಿ

ತಪ್ಪುಗಳ ತಿಳಿ ಹೇಳು, ಸರಿಪಡಿಸಿಕೊಳ್ಳುವೆ

ಸಂದರ್ಭವ ವಿವರಿಸಿದರೆ ,ನಾ ಅರ್ಥೈಸಿಕೊಳ್ಳುವೆ

ಬದಲಾಗಿರುವೆ ನೀನೇ ನೋಡು.

ಕಂಗಳ ಒಳಗಿರುವ ಗೊಂದಲದ ಜಾಡು,

ಬಾನಾಡಿಯ ಎಲ್ಲೆ ಮೀರಿ ಹಾರಿಹೋಗಲಿ.

ನಗುತಿರು ಎಂದೆನೆನು

ನೀನೇ ಹೇಳುವಂತೆ ನೋವಲೂ ನಗಲು

ನೀನೇನು ಯಂತ್ರವಲ್ಲ.

ನೀ ನಗುತಿರಬೇಕೆಂದು ಮನಸಾರೆ ಹಾರೈಸುವೆಯಷ್ಟೇ.

ಎಲ್ಲರ ನಗುವ ಬಯಸುವ ನಿನ್ನಯ ನಗು,

ಹಸನಾಗಿರಬೇಕು.

ದೂರದಿ ನಿಂತು ನಾ ಪ್ರೇಕ್ಷಕಳಾಗಿ 

ಹಾರೈಸುವುದಿಷ್ಟನೇ.


Rate this content
Log in

Similar kannada poem from Tragedy