STORYMIRROR

Prabhakar Tamragouri

Tragedy Classics Others

4  

Prabhakar Tamragouri

Tragedy Classics Others

ಮಳೆಯ ನೆನಪಲ್ಲಿ

ಮಳೆಯ ನೆನಪಲ್ಲಿ

1 min
351


ಆಷಾಢದ ಮುಸ್ಸಂಜೆ 

ಧೋಧೋ ಸುರಿಯುವ 

ಮಳೆಯನ್ನೇ ನೋಡುತ್ತಾ 

ತನ್ನ ಪುಟ್ಟ ಕೋಣೆಯಲ್ಲಿ

ಗಲ್ಲಕ್ಕೆ ಕೈಯಾನಿಸಿ ಕುಳಿತ 

ಹುಡುಗಿಯ ಮೈಮನಗಳಲೆಲ್ಲಾ 

ಮಳೆಯ ಕನಸು !


ಹೊರಗೆ ಗಟಾರದಲ್ಲಿ ಹರಿದು ಹೋಗುವ 

ಕೆಂಪು ರಾಡಿ ನೀರು 

ಅದರಮೇಲೆ ತೇಲಿಬಿಟ್ಟ ಕಾಗದದ ದೋಣಿಯಲ್ಲಿ 

ಪುಟ್ಟ ಪುಟ್ಟ ಕಲ್ಲುಗಳು ತೇಲುತ್ತಾ ತೇಲುತ್ತಾ 

ತನ್ನ ಕಣ್ಣೆದುರೇ ನೀರಲ್ಲಿ ಮುಳುಗಿದ್ದನ್ನು ಕಂಡು 

ತಣ್ಣನೆಯ ಗಾಳಿಯಲ್ಲೂ ಬೆವರಿದಳು

ಕಾಲದ ಕೈಯಲ್ಲಿ ತಾನೂ 

ಕಾಗದದ ದೋಣಿ ಆಗುವೆನೇನೋ 

ಎಂಬ ಭೀತಿಯಲ್ಲಿ ಕನಸಿನಲ್ಲಿಯೂ ಬೆಚ್ಚಿದಳು 

ಮಳೆ ಬಂದು ನಿಂತಮೇಲೆ 

ಹನಿಹನಿ ತೊಟ್ಟಿಕ್ಕುವ 

ಮರದ ಎಲೆಯ ಹನಿಗೆ ನಾಲಿಗೆ ಚಾಚಿ 

ಧರೆಯ ಸಹಜ ಆರ್ದ್ರತೆಯ 

ಆಪ್ತತೆಗೆ ಒದ್ದೆಯಾದಳು !


ಮರದ ಗೂಡಿನಂಚಿನಲ್ಲಿ ಕುಳಿತ ಪುಟ್ಟ ಹಕ್ಕಿ 

ಪಟಪಟನೆ ರೆಕ್ಕೆ ಬಡಿವಾಗ 

ಹಾರಲಾಗದ ಹೆಣ್ಣು ಹಕ್ಕಿಯಂತೆ 

ಅಸಹಾಯಕತೆಯಿಂದ ಚಡಪಡಿಸಿದಳು 

ಹಠ ಹಿಡಿದ ಮುದ್ದು ಕಂದನಂತೆ

ಒಂದೇ ಸಮನೆ ಸುರಿಯುತ್ತಿರುವ 

ಧಾರಾಕಾರ ಮಳೆಯ ಕಂಡು 

ಲಾಲಿ ಹಾಡುವ ತಾಯಿಯಂತೆ 

ಪುಟ್ಟ ಮಗುವಿನ ಕನಸಿಗೆ ಮುದಗೊಂಡಳು 

ಗಲ್ಲಕ್ಕೆ ಕೈಯಾನಿಸಿ ಕುಳಿತ 

ಹುಡುಗಿಯ ಮೈಮನಗಳಲೆಲ್ಲಾ 

ಮುಂಗಾರಿನ ಮಳೆಯ ಹನಿಗೆ ಮಣ್ಣಿನೆದೆಯಾದಳು




Rate this content
Log in

Similar kannada poem from Tragedy