ತೋರ್ಪಡಿಕೆ ಜೀವನ
ತೋರ್ಪಡಿಕೆ ಜೀವನ
ಒಡನಾಟ ಬಡಿದಾಟ
ಬರೀ ತೋರ್ಪಡಿಕೆ ಜೀವನ
ರೋಡಿಗಿಳಿದು ಎಬ್ಬಿಸಿ
ಹಾಹಾಕಾರ
ಒಂದೇ ಕೋಣೆಯಲ್ಲಿ ಅಕ್ಕ ಪಕ್ಕ
ಕುಳಿತು ಹಾಕುವರು ಜೈಕಾರ
ಜನರಿಗಾಗಿ ಮಾಡುವರು ಶಪಥ
ಹಿಂದಿನಿಂದ ತಮಗೆ ಬೇಕಿದ್ದು
ಸಿಗಲಿಲ್ಲ ಎಂದು ಶತಪಥ
ರಾಜಕಾರಣವೇ ಹೀಗೆಯೋ
ಕಾರ್ಯಕರ್ತರೇ ಹೀಗೆಯೋ
ಒಟ್ಟಿನಲ್ಲಿ ಇಲ್ಲಿ ರಾಜಕಾರಣ
ಸುಳ್ಳು ಮೋಸಗಳ ಆಭರಣ
ಏನೇನೋ ಒಡಂಬಡಿಕೆ
ಎಲ್ಲವೂ ಮಾತಿಗಾಗಿ ಪೀಠಿಕೆ
ಜನರ ಮುಂದೆ ಒಂದು
ಬೆನ್ನ ಹಿಂದೆ ಇನ್ನೊಂದು
ಒಳ್ಳೆಯತನದ ಮುಖವಾಡ
ಕಳಚಿದರೆ ಘೋಮುಖ ವ್ಯಾಘ್ರ
ಮಾನವೀಯತೆಯ ಪಾಠ
ಕೈ ಕೈ ಮಿಲಾಯಿಸಿ ಬಡಿದಾಟ
ಬರೀ ತೋರಿಕೆಯ ಜೀವನ
ನಂಬಿದರೆ ವ್ಯರ್ಥ ನಮ್ಮ ಜೀವನ!