ಪ್ರೀತಿಯ ಕಥೆ
ಪ್ರೀತಿಯ ಕಥೆ
ಎಲ್ಲಾ ಪ್ರೀತಿಗೂ ಒಂದು
ಕಥೆಯಿದೆ..
ಮನ ಮಿಡಿಯುವ ಈ
ಕಥೆಗೆ ಯಾರು ನಾಯಕರು?
ಅರಿವಿಲ್ಲ ಹೇಗಿದೆ ಈ ಕಥೆ
ಕಣ್ಣೀರೋ ಪನ್ನೀರೋ
ನೋವು ನಲಿವಿನ ಪೂರ
ವ್ಯಾಖ್ಯಾನವೋ.?
ಪರಸ್ಪರ ಪ್ರೀತಿಯಿತ್ತು
ಮನದಲ್ಲಿ..
ಆದರೂ ಮೌನವಿತ್ತು
ಎದುರಿನಲ್ಲಿ..
ಮಾತುಗಳು ಪದಗಳಾಗಿ
ಬಂದರೂ
ಭಾವಗಳು ಮಾತುಗಳಾಗಿ
ಬರಲೇ ಇಲ್ಲ..!
ಸ್ನೇಹ ಎಂಬ ಬೇಲಿಯ
ತಾನೇ ಹಾಕಿ
ಮನದಲ್ಲಿದ್ದ ಪ್ರೀತಿಯನ್ನು
ಸಮಾಧಿ ಮಾಡಿದ್ದು
ಯಾಕೋ ಅರಿವಿಲ್ಲ..!

