ಮತ್ತು-ಮುತ್ತು
ಮತ್ತು-ಮುತ್ತು


ಆಗಸದಲಿ ಶಶಿಯ ಆಗಮನ
ಆಗಿದೆ ಭಾಸ್ಕರನ ನಿರ್ಗಮನ
ಮೊಗ್ಗ ಅರಳಿಸುವಾಸೆ ಹೊತ್ತು
ಬಿಗಿದಪ್ಪಿದ ಜೋಡಿಗೆ ಸನ್ಮಾನ
ಬಳಸಿದರಸಿಯ ಬಳೆಗಳ ನಾದ
ಒಳಜಾರಿ ಅವನ ನಿದ್ದೆಗೆಡಿಸಿತ್ತು
ಬಾಳ ಬಂಧನದ ತೋಳ ತೆಕ್ಕೆಗೆ
ಬಳಲಿ ಬೆಂಡಾಗಿ ಸೋತು ಗೆದ್ದಿತ್ತು
ಗಗನದಿ ರವಿಕಿರಣ ಮೂಡಿ
ನಗುವ ಚೆಲ್ಲಿ ತಂಗಾಳಿ ಬೀಸಿತ್ತು
ಖಗಗಳ ಚಿಲಿಪಿಲಿ ನಾದಕ್ಕೆ
ಇತ್ತ ಮುತ್ತು ಮತ್ತನೇರಿಸಿತ್ತು